ಗೋಕಾಕಿನಲ್ಲಿ ಬೈಕ್ ರೌಂಡ್ಸ್ ಹಾಕಿದ ಮಿನಿಸ್ಟರ್ ರಮೇಶ್ ಜಾರಕಿಹೊಳಿ‌

ಗೋಕಾಕ್‌ ; ಕೊರೊನಾ ಹರಡದಂತೆ ಏಪ್ರಿಲ್ 14ರವರೆಗೆ ಭಾರತಾದ್ಯಂತ ಲಾಕ್‌ಡೌನ್ ಇದ್ದು ಗೋಕಾಕ್‌ ನಗರದಲ್ಲಿ ಬೈಕ್‌ನಲ್ಲಿ ರಮೇಶ್ ಜಾರಕಿಹೊಳಿ‌ ರೌಂಡ್ಸ್ ಹಾಕಿ ಲಾಕ್ ಡೌನ್ ವ್ಯೆವಸ್ಥೆಯನ್ನು ಪರಿಶೀಲಿಸಿದರು.
ಬೆಳಗಾವಿ ಜಿಲ್ಲೆ ಗೋಕಾಕ್ ನಗರದಲ್ಲಿ ಬೈಕ್ ರೌಂಡ್ಸ್ ಹಾಕಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬೀದಿಯಲ್ಲಿ ಸುತ್ತಾಡುತ್ತಿದ್ದ ಸಾರ್ವಜನಿಕ ರಲ್ಲಿ ಮನೆಗೆ ಹೋಗುವಂತೆ ಮನವಿ ಮಾಡಿಕೊಳ್ಳುತ್ತ ಮುಂದೆ ಸಾಗುತ್ತಿದ್ದರು.
ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಮೇಶ್ ಜಾರಕಿಹೊಳಿ‌
ಬೈಕ್ ರೌಂಡ್ಸ್‌ಗೂ ಮುನ್ನ ಅಧಿಕಾರಿಗಳ ಜೊತೆ ಸಭೆ ನಡೆಸಿದ ರಮೇಶ್ ಜಾರಕಿಹೊಳಿ‌ ಗೋಕಾಕ್ ತಾಲೂಕಿನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ಮಾಹಿತಿ ಪಡೆದ ಸಚಿವರು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು‌
Share
WhatsApp
Follow by Email