ಮುದ್ದೇಬಿಹಾಳ : ಗೋವಾದಲ್ಲಿ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು

ಮುದ್ದೇಬಿಹಾಳ: ಸಧ್ಯ ಮಹಾಮಾರಿ ಕೋರೋನಾ ವೈರಸ್ ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಕೇಂದ್ರ ಹಾಗು ರಾಜ್ಯ ಸರಕಾರ ಲಾಕ್ ಡಾನ್ ಕರೆ ನೀಡಿದ ಹಿನ್ನೇಲೆಯಲ್ಲಿ ಗ್ರಾಮದವರು ಗೋವಾದ ಪೋಂಡಾದಲ್ಲಿ ದುಡಿಯುವ ಸಲುವಾಗಿ ಹೋಗಿದ್ದ ತಾಲೂಕಿನ ಮಲಗಲದಿನ್ನಿ, ಅಡವಿ ಸೋಮನಾಳ, ಚವನಭಾವಿ, ಅಡವಿ ಹುಲಗಬಾಳ,ಹಗರಗುಂಡ, ಬಿಜ್ಜೂರ ಸ್ಭೆರಿದಂತೆ ಅನೇಕ ಗ್ರಾಮದವರು ೨೦೦ ಹೆಚ್ಚು ಕುಟುಂಭಗಳಿಗೆ ಮಕ್ಕಳಿಗೆ ಅನ್ನ ನೀರು ಆಹಾರ ಹಾಲು ಸಿಗದೇ ಅನಾಥರಾಗಿದ್ದಾರೆ.

ಈ ಸಂದರ್ಭದಲ್ಲಿ ಗೋವಾ ಸರಕಾರ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ನಮ್ಮ ತಾಲೂಕಿನ ಕನ್ನಡಿಗರಗೆ ಯಾವೂದೇ ಸೌಲಭ್ಯ ನೀಡದೇ ಅನ್ಯಾಯ ಮಾಡಲಾಗುತ್ತಿದೆ.

ಈ ಬಗ್ಗೆ ಸ್ವತಃ ಗೋವಾ ನೆಲದಲ್ಲಿ ನಿಂತು ಚವನಭಾವಿ ಗ್ರಾಮದ ಕುಟುಂಭದ ವ್ಯಕ್ತಿಯೊರ್ವನು ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿ. ಈಗಾಗಲೇ ಕೋರೋನಾ ವೈರಸ್ ನಿಂದಾಗಿ ಕೇಂದ್ರ ಸರಕಾರ ಲಾಕ್ ಡಾನ್ ಮಾಡಿದ್ದರಿಂದ ನಮಗೆ ಕಂಪನಿಯ ಕೆಲಸಗಳು ನಿಂತು ಹೋಗಿವೆ ಹೇಗೋ ಕೂಲಿ ಮಾಡಿ ಜೀವನ ನಡೆಸುತ್ತಿರುವ ನಮಗೆ ಊಟ, ಉಪಹಾರ, ನೀರು ಸಿಗುತ್ತಿಲ್ಲ, ಹೇಗಾದರೂ ಮಾಡಿ ಪಡೆಯಬೇಕು ಎಂಬ ಉದ್ದೇಶದಿಂದ ಹೊರಗಡೆ ಹೋದರೇ ಪೋಲಿಸರು ಎಲ್ಲಿಯೂ ಹೋಗಲು ಬಿಡುತ್ತಿಲ್ಲ ನಮ್ಮ ಮಕ್ಕಳು ಕಳೇದ ನಾಲ್ಕು ದಿನಗಳಿಂದ ಹಾಲು ಮಾತ್ರವಲ್ಲ ಯಾವೋಂದ ದಿನಸಿ ಕೂಡ ತಿಂದಿಲ್ಲ ಹಾಗಾಗಿ ನಮ್ಮ ಕುಟುಂಭಗಳ ತೀರ ಸಂಕಷ್ಟದಲ್ಲಿದ್ದೇವೆ.

ಕಾರಣ ನಮ್ಮ ರಾಜ್ಯ ಸರಕಾರ ಈ ಕೂಡಲೇ ಗೋವಾ ಸರಕಾರದೊಂದಿಗೆ ಮಾತುಕತೆ ನಡೆಸಿ ನಾವು ನಮ್ಮ ಸ್ವಗ್ರಾಮಕ್ಕೆ ಮರುವಂಎ ವ್ಯವಸ್ಥೆ ಕೈಗೊಳ್ಳಬೇಕು ಇಲ್ಲವೆಚಿದರೇ ಊಟ, ಉಪಹಾರ, ಹಾಲು ವಿತರಣೆ ಮಾಡುವಲ್ಲಿ ಮುಂದಾಗಬೇಕಿದೆ ಎಂದಿದ್ದಾರೆ.

ಈ ಸoದರ್ಭದಲ್ಲಿ .ಬಸವರಾಜ ವಗ್ಗೇರ, ತಮ್ಮಣ್ಣ ಚಿಗರಿ, ಬಸಪ್ಪ ಯರಝರಿ, ಯಲ್ಲಪ್ಪ ಹಡಗಲಿ, ಮಾನಪ್ಪ ಕಂಬಳಿ, ದೇವಪ್ಪ , ಸಂಗಪ್ಪ ಕುರಿ, ಮತ್ತಿತರರು ಇದ್ದಾರೆ

Share
WhatsApp
Follow by Email