ವಿಜಯಪುರ :ಗಡಿಭಾಗದಲ್ಲಿ ಲಾಟಿ ಚಾಜ್ ಆಗುವ ಸಾಧ್ಯತೆ

ವಿಜಯಪುರ : ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ಸಾವಿರಾರು ಜನರು ಜಮಾಸಿದ್ದಾರೆ, ಕಾರಣ ಮಹಾರಾಷ್ಟ್ರ ರಾಜ್ಯದಲ್ಲಿ ಪ್ರವೇಶ ವಿಲ್ಲಾ , ಅಲ್ಲಿನ ಪೋಲಿಸರು ಇವರಿಗೆ ಬಿಡುವುದಿಲ್ಲ,
4000 ರಿಂದ 5000 ಜಮಾ ವಾದ ಜನರು.
ರಾಜಸ್ಥಾನ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಗುಜರಾತ್, ಬಿಹಾರ, ಮಧ್ಯ ಪ್ರದೇಶ, ಹಲವಾರು ರಾಜ್ಯದ ಜನರು ಗಡಿಭಾಗದಲ್ಲಿ ಬಂದು ಇಳಿದ್ದಾರೆ,
ಅವರನ್ನು ನಮ್ಮ ಕರ್ನಾಟಕ ರಾಜ್ಯದ ಪೋಲಿಸರು ಬಿಟ್ಟರೆ , ಮಹಾರಾಷ್ಟ್ರ ರಾಜ್ಯದ ಪೋಲಿಸರು ಅವರನ್ನು ಮರಳಿ ಕಳಿಸುತ್ತಿದ್ದಾರೆ, ಹೀಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದಾರೆ,

ಮಹಿಳೆಯರು, ಸಣ್ಣ ಪುಟ್ಟ ಮಕ್ಕಳಿಗೆ , ಗರ್ಭಿಣಿಯರು, ಕುಂಟರು, ಅಂಗವಿಕಲರಿಗೆ, ಯುವಕರು ಸೇರಿದಂತೆ ಜನರು ಜಮಾಯಿಸಿದ್ದಾರೆ. ಎರಡು ಮೂರು ದಿನಗಳಿಂದ ಇವರು ಕರ್ನಾಟಕ ಗಡಿಭಾಗದಲ್ಲಿ ಉಳಿದ್ದಾರೆ, ಅವರನ್ನು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲಾಧಿಕಾರಿ ಜೊತೆಯಲ್ಲಿ ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲಾಧಿಕಾರಿ ಗಳು ಮಾತನಾಡಿ ಇವರಿಗೆ ತಮ್ಮ ತಮ್ಮ ರಾಜ್ಯಗಳಿಗೆ ಹೋಗಲು ಅನುಮತಿ ನೀಡಬೇಕೆಂದು ಅವರ ಮನವಿ ಮಾಡಿದ್ದಾರೆ

ಆದರೆ ಗಡಿಭಾಗದಲ್ಲಿ ಲಾಟಿ ಚಾಜ್ ಆಗುವ ಸಾಧ್ಯತೆ ಇದೆ , ಮಹಾರಾಷ್ಟ್ರ ರಾಜ್ಯದ ಪೋಲಿಸ್ ಮತ್ತು ಕರ್ನಾಟಕ ರಾಜ್ಯದ ಪೋಲಿಸ್ ನಡುವೆ ವಾಗ್ವಾದ ನಡೆದಿದೆ.
ಮಹಾರಾಷ್ಟ್ರ ರಾಜ್ಯ ದಿಂದ ಬಂದ ಲಾರಿಯಲ್ಲಿನ ಜನರಿಗೆ ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆ ಯಿಂದ ಯಾವುದೆ ತೊಂದರೆ ನೀಡುತ್ತಿಲ್ಲ. ಎಲ್ಲರನ್ನೂ ಅಲ್ಲಿಂದ ಬಂದ ಜನರನ್ನು ತಮ್ಮ ಸ್ವಂತ ಊರುಗಳಿಗೆ ಕಳಿಸುತ್ತಾರೆ.

ಆದರೆ ಕರ್ನಾಟಕ ದಿಂದ ಮಹಾರಾಷ್ಟ್ರ, ಬಿಹಾರ, ರಾಜಸ್ಥಾನ, ಓಡಿಸ್ಸಾ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಜನರನ್ನು ಮರಳಿ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಪೋಲಿಸರು ಮರಳಿ ಕಳಿಸುತ್ತಿದ್ದಾರೆ ,

ಕರ್ನಾಟಕ ರಾಜ್ಯದ ಗಡಿಭಾಗದಲ್ಲಿ ಚಕ್ ಪೋಸ್ಟ್ ಗೆ ಇಂಡಿ ಮತ್ತು ಚಡಚಣ ತಹಶಿಲ್ದಾರರ, ಇಂಡಿ ಎ ಸಿ ಸ್ನೇಹಲ್ ಸುಧಾಕರ ಲೋಕಂಡೆ, ಚಡಚಣ ಸಿ ಪಿ ಐ ಮತ್ತು ಇಂಡಿ ಸಿ ಪಿ ಐ , ಝಳಕಿ PSI, ಹೋರ್ತಿ PSI, ಚಡಚಣ PSI, ತಾ ಆರೋಗ್ಯ ಅಧಿಕಾರ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

Share
WhatsApp
Follow by Email