ಪೌರ ಕರ‍್ಮಿಕರಿಗೆ ಉಚಿತ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಣೆ ಮಾಡಿದ ಗಜಾನನ ಮಂಗಸೂಳಿ

ಅಥಣಿ ; ಪಟ್ಟಣದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ ಇಡಿ ಪಟ್ಟಣವನ್ನು ಸ್ವಚ್ಚ ಹಾಗೂ ಸುಂದರಗೊಳಿಸಲು ಶ್ರಮಿಸುತ್ತಿರುವ ಪುರಸಭೆ ಸಿಬ್ಬಂದಿಗೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಎಂಭತ್ತಕ್ಕೂ ಹೆಚ್ಚು ಪೌರ ಕರ‍್ಮಿಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮತ್ತು ಸ್ಯಾನೀಟೈಜರ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಗಜಾನನ ಮಂಗಸೂಳಿ ಸಮಾಜದ ಸ್ವಾಸ್ಥ್ಯ ಕಾಯುವ ನಿಟ್ಟಿನಲ್ಲಿ ಮತ್ತು ಸರ‍್ವಜನಿಕ ಹಿತಾಸಕ್ತಿಗಾಗಿ ದುಡಿಯುವ ರ‍್ಗಕ್ಕೆ ಸೇರಿದ ಪುರಸಭೆ ಕರ‍್ಮಿಕರ ಹಿತ ಕಾಯುವದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.ನಿತ್ಯವೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತಾ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯವಂತರಾಗಿರಬೇಕು ಆದ್ದರಿಂದ ಅವರಿಗೆ ಇಂದು ಉಚಿತ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಗಿದೆ. ವಿಶ್ವವ್ಯಾಪಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ನಮ್ಮ ದೇಶದಲ್ಲಿ ಹರಡದಂತೆ ಮತ್ತು ಹೆಚ್ಚಿನ ಸಾವುನೊವುಗಳಾಗದಂತೆ ತಡೆಯಲು ಜನರು ಮನೆಯಲ್ಲಿ ಉಳಿಯುವ ಮೂಲಕ ಸಹಕರಿಸಬೇಕು ಎಂದು ಸರ‍್ವಜನಿಕರಲ್ಲಿ ಮನವಿ ಮಾಡಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹಂತೇಶ್ ಕವಲಾಪೂರ, ಕಿರಿಯ ಆರೋಗ್ಯ ನಿರೀಕ್ಷಕ ಬಸವರಾಜ ಬೋಳಿಶೆಟ್ಟಿ,ವಿಶಾಲ ಮಂಗಸೂಳಿ, ಮನೋಹರ ಹಂಜಿ,ಮತ್ತು ಸಮಾಜ ಸೇವಕ ದೀಪಕ ಶಿಂಧೆ,ಮಾನವ ಹಕ್ಕು ಸಂಘಟನೆಯ ಅಬ್ದುಲ್ ಜಬ್ಬಾರ ಚಿಂಚಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email