ಬ್ರೇಕಿಂಗ್ ನ್ಯೂಸ್ ಅರಟಾಳ; ರೈತ ಬೆಳೆದ ಕಲಂಗಡಿ ಬೆಳೆ ನಾಶ 31/03/202031/03/20201 min read admin ಅರಟಾಳ ; ಗ್ರಾಮದ ರೈತರಾದ ಅಪ್ಪಸಾಬ ಜಂಬಗಿ ಇವರು 30ಗುಂಟೆ ಜಮೀನಿನಲ್ಲಿ ಕಲಂಗಡಿ ಬೆಳೆದಿದ್ದಾರೆ. ಬೆಳೆದ ಬೆಳೆ ಕೈಸೇರುತ್ತದೆ ಎನ್ನುವ ನಂಬಿಕೆಯು ಹೋಗಿದೆ. ಈಗ ಕಲಂಗಡಿ ಹಣ್ಣು ಮಾರಾಟಕ್ಕೆ ಬಂದಿದೆ. ಆದರೆ ಕರೊನಾ ವೈರಸ್‌ದಿಂದ ದೇಶವೇ ಲಾಕ್ ಡೌನ್ ಆಗಿದೆ. ಬೆಳದ ಕಲಂಗಡಿ ಹಣ್ಣು ಹೊಲದಲ್ಲಿ ನಾಶವಾಗುತ್ತಿದೆ. ಕಷ್ಟ ಪಟ್ಟು ಸಾಲಸೂಲ ಮಾಡಿ ಬೆಳೆ ಬೆಳೆದ ರೈತರಿಗೆ ಈಗ ಸಂಕಷ್ಟ ಎದುರಾಗಿದೆ. ಮಾರಾಟಕ್ಕೆ ಬಂದ ಹಣ್ಣು ಮಾರ್ಕೆಟ ಮಾಡಬೇಂಕೆದರೆ ಮಾರ್ಕೆಟಗಳು ಬಂದ ಇವೆ. ಬೇರೆಡೆ ಹೋಗಿ ಹಣ್ಣು ಮಾರಾಟ ಮಾಡಬೇಕೆಂದರೆ ಲಾಕ್‌ಡೌನ್ ಆಗಿರುವುದರಿಂದ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಈಗ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಬಾಕ್ಸ ; ಕಲಂಗಡಿ ಬೆಳೆಯಿಂದ ಉತ್ತಮ ಲಾಭ ಬರುತ್ತದೆ ಎಂದು ಕಲಂಗಡಿ ಬೆಳೆದೆ. ಆದರೆ ಕರೊನಾ ವೈರಸ್ ಹಾವಳಿಯಿಂದ ರಾಜ್ಯವೇ ಲಾಕ್ ಡೌನ್ ಆಗಿದೆ. ಮಾರಾಟ ಮಾಡಲು ಆಗುತ್ತಿಲ್ಲ, ಮಾರಾಟಕ್ಕೆ ಬಂದ ಹಣ್ಣು ನಾಶವಾಗುತ್ತಿದೆ. -ಅಪ್ಪಸಾಬ ಜಂಬಗಿ ರೈತ. ಬಾಕ್ಸ ; ದೇಶವೇ ಕರೊನಾ ವೈರಸ್‌ನಿಂದ ಲಾಕ್ ಡೌನ್ ಆಗಿದೆ. ಲಾಕ್ ಡೌನ್ ಮುಗಿವುವರೆಗೆ ರೈತರು ಸಹಕರಿಸಬೇಕು. ಎಮ್. ಎಮ್. ಮಲ್ಲುಖಾನ್ ತಲಾಟಿ ಅರಟಾಳ. Share