ಕರ್ತವ್ಯ ಲೋಪ ಹಿನ್ನಲೆ ಮಹಾಲಿಂಗಪುರ ಠಾಣಾಧಿಕಾರಿ ಆರ್ ವೈ ಬೀಳಗಿ ಅಮಾನತು

ಮಹಾಲಿಂಗಪುರ : ರವಿವಾರ ಸಮೀಪದ ಮಾರಾಪುರ ಗ್ರಾಮದಲ್ಲಿ ಸಾರಾಯಿ ಮಾರಾಟ ಮಾರುತ್ತಿದ್ದವರ ಮೇಲೆ ದಾಳಿ ನಡೆಸಿ ಅವರಿಂದ ತೆಗೆದುಕೊಂಡು ಹಣವನ್ನು ಸರಿಯಾಗಿ ಕೇಸನಲ್ಲಿ ದಾಖಲಿಸದೆ ಕರ್ತವ್ಯ ಲೋಪವೆಸಗಿರುವ ಹಿನ್ನಲೆಯಲ್ಲಿ ಬಾಗಲಕೋಟ ಎಸ್ ಪಿ ಲೋಕೇಶ್ ಜಗಳಸಾರ ಅವರು ಸ್ಥಳೀಯ ಠಾಣಾಧಿಕಾರಿ ಆರ್ ವೈ ಬಿಳಗಿಯವರನ್ನು ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ವಿವರ : ಸ್ಥಳೀಯ ಪಿಎಸ್ ಐ ರಾಜು ಹುಬ್ಬಳ್ಳಿ ಪೊಲೀಸ್ ಪ್ರಕರಣ ಸಂಖ್ಯೆ 34, 2020 ಕಲಂ 32.34 ಕೆ. ಇ ಆಕ್ಟ್ ನೇದ್ದರ ಪ್ರಕರಣದಲ್ಲಿ ಅರ್ಜಿದಾರರ ಗಂಡ ದಸ್ತಗಿರಿ ಸಾಬ್ ನದಾಫ್ ಹಾಗೂ ಆತನ ಸಹೋದರ ಸಲೀಂ ನದಾಫ್ ಇವರು ಅಧಿಕೃತವಾಗಿ ಬೆಂಗಳೂರು ವಿಸ್ಕಿ ಕಂಪನಿಯ 90 ಎಂ. ಎಲ್. ಅಳತೆಯ 144 ಪೌಚ್ ಗಳನ್ನು ಮಾರಾಟ ಮಾಡುತ್ತಿರುವಾಗ ಆಪಾದಿತ ದಸ್ತಗೀರ್ ಸಾಬ್ ನದಾಫ್ ಸಿಕ್ಕಿರುತ್ತಾರೆ. ಸಲೀಂ ನಧಾಪ್ ಪರಾರಿಯಾಗಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ 144 ಪೌಚ್ ಗಳನ್ನು ಹಾಕಿಡಲು ಬಳಸಿದ ಪ್ಲಾಸ್ಟಿಕ್ ಬ್ಯಾಗ್ ಹಾಗೂ ರೋಖ ಹಣ 2280ರೂ ಜಪ್ತಿ ಮಾಡಿ ರುವ ಬಗ್ಗೆ ಮಾತ್ರ ಉಲ್ಲೇಖವಿದ್ದು, ಅರ್ಜಿದಾರರು ಅವರ ಮನೆಯಲ್ಲಿರುವ ರೋಖ ಹಣ 1 ಲಕ್ಷ 60 ಸಾವಿರ ರೂಗಳನ್ನು ತೆಗೆದುಕೊಂಡು ಸಾವಿರ ರೂ ಗಳನ್ನು ತೆಗೆದುಕೊಂಡ ಬಗ್ಗೆ ಎಲ್ಲಿಯೂ ಉಲ್ಲೇಖಿಸುವುದಿಲ್ಲ ಆದರೆ ಜಮಖಂಡಿಯ ಡಿಎಸ್ ಪಿ ಮತ್ತು ಮುಧೋಳದ ಸಿಪಿಐ ರವರು ಸಮಕ್ಷಮ ರಾಜು ಬೆಳಿಗ್ಗೆ ಅವರನ್ನು ವಿಚಾರಿಸಿದಾಗ ತಾನು ಹಣ ತಂದಿರುವುದು ಸರಿ ಎಂದು ಒಪ್ಪಿಕೊಂಡಿದ್ದಾರೆ.
ಆ ಬಗ್ಗೆ ಸಂಬಂಧಿತವಾದ ವಿವರಣೆ ನೀಡಲು ವಿಫಲರಾಗಿರುತ್ತೀರಿ ಈ ಕುರಿತು ಜಮಖಂಡಿಯ ಡಿ ಎಸ್ ಪಿ ಯವರು ಶಿಸ್ತಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು. ನೀವು ನಿಮ್ಮ ಅಜ್ಜ ಕರ್ತವ್ಯದಲ್ಲಿ ಘೋರ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿಗೆ ಪ್ರದರ್ಶಿಸಿರುತ್ತೀರಿ. ಈ ನಿಮ್ಮ ಕರ್ತವ್ಯ ನಿರ್ಲಕ್ಷ್ಯತನದ ಬಗ್ಗೆ ನಿಮ್ಮ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇಟ್ಟು ಈ ಆದೇಶ ಜಾರಿಯಾದ ದಿನಾಂಕದಿಂದ ನಿಮ್ಮನ್ನು ಸೇವೆಯಿಂದ ಅಮಾನತ್ತಿನಲ್ಲಿರಿಸಲಾಗಿದೆ ಎಂದು ಬಾಗಲಕೋಟೆ ಎಸ್ ಪಿ ಲೋಕೇಶ್ ಜಗಳಸಾರ ಆದೇಶ ಹೊರಡಿಸಿದ್ದಾರ
Share
WhatsApp
Follow by Email