ಬ್ರೇಕಿಂಗ್ ನ್ಯೂಸ್ ಪೋಲಿಸ್ ಸಿಬ್ಬಂದಿಗೆ ಉಚಿತ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಣೆ ಮಾಡಿದ ಗಜಾನನ ಮಂಗಸೂಳಿ 31/03/202031/03/2020 admin ಅಥಣಿ: ತಾಲೂಕಿನಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ 144 ಜಾರಿಗೊಳಿಸುವ ಮೂಲಕ ಹೆಚ್ಚು ಜನಸಂಚಾರ ಮತ್ತು ಗುಂಪು ಕೂಡದಂತೆ ಆದ್ಯತೆ ನೀಡಿ ಅಥಣಿ ತಾಲೂಕಿನ ಶಾಂತಿ ಸುವ್ಯವಸ್ಥೆಗೆ ಶ್ರಮಿಸುತ್ತಿರುವ ಪೋಲಿಸ್ ಸಿಬ್ಬಂದಿಗೆ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಎಂಭತ್ತಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮತ್ತು ಸ್ಯಾನೀಟೈಜರ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಗಜಾನನ ಮಂಗಸೂಳಿ ಸಮಾಜದ ಸ್ವಾಸ್ಥ್ಯ ಕಾಯುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಶ್ರಮವಹಿಸಿ ಕೆಲಸವನ್ನು ಅಚ್ಚುಕಟ್ಟಾಗಿ ನೀರ್ವಹಿಸುತ್ತಿರುವ ಪೋಲಿಸ್ ಸಿಬ್ಬಂದಿಯ ಹಿತ ಕಾಯುವದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.ನಿತ್ಯವೂ ಜನಹಿತಕ್ಕಾಗಿ ಕೆಲಸದಲ್ಲಿ ತೊಡಗುವ ಪೋಲಿಸ್ ಸಿಬ್ಬಂದಿ ಆರೋಗ್ಯವಂತರಾಗಿರಬೇಕು ಆದ್ದರಿಂದ ಅವರಿಗೆ ಇಂದು ಉಚಿತ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಲಾಗಿದೆ. ವಿಶ್ವವ್ಯಾಪಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೊನಾ ನಮ್ಮ ದೇಶದಲ್ಲಿ ಹರಡದಂತೆ ಮತ್ತು ಹೆಚ್ಚಿನ ಸಾವುನೊವುಗಳಾಗದಂತೆ ತಡೆಯಲು ಜನರು ಮನೆಯಲ್ಲಿ ಉಳಿಯುವ ಮೂಲಕ ಪೋಲಿಸರಿಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.ಈ ವೇಳೆ ಅಥಣಿ ಡಿವೈ ಎಸ್ಪಿ ಎಸ್ ವಿ ಗಿರೀಶ. ಸಿಪಿಐ ಶಂಕರಗೌಡ ಬಸನಗೌಡ. ರಾಹುಲ ಮಂಗಸೂಳಿ, ವಿಶಾಲ ಮಂಗಸೂಳಿ. ಮತ್ತು ಸಮಾಜ ಸೇವಕ ದೀಪಕ ಶಿಂಧೆ. ಮಾನವ ಹಕ್ಕು ಸಂಘಟನೆಯ ಅಬ್ದುಲ್ ಜಬ್ಬಾರ ಚಿಂಚಲಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು. Share