ಕಟಗೇರಿ ಗ್ರಾಮ ಪಂಚಾಯಿತಿ ಬೀದಿಗಳಲ್ಲಿ ಸೋಂಕು ನಿವಾರಕ ಔಷಧ ಸಿಂಪರಣೆ

ಕಟಗೇರಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಸಿಬ್ಬಂದಿ ಕೊರೊನಾ ಸೋಂಕು ನಿಯಂತ್ರಿಸಲು ಔಷಧ ಸಿಂಪರಣೆ ಮಾಡಿದರು.
ಗ್ರಾಮದ ಬಸವೇಶ್ವರ ಕ್ರಾಸ್‌, ಹಳೆ ಬಸ್‌ನಿಲ್ದಾಣ, ಅಗಸಿ , ವಾಲ್ಮೀಕಿ ಹಾಗೂ ಅಂಬೇಡ್ಕರ್‌ ಕಾಲೊನಿಯ ಬಹುತೇಕ ಕಡೆಗಳಲ್ಲಿ ರೋಗ ನಿಯಂತ್ರಕ ಔಷಧ ಸಿಂಪರಣೆ ಮಾಡಲಾಯಿತು.
ವ್ಯಾಪಾರಸ್ಥರಿಗೆ ಮನೆಮನೆಗೆ ತರಕಾರಿ ಮಾರಲು ತಿಳಿಸಿದರು. ವಿನಾಕಾರಣ ಹೊರಗೆ ಬಾರದಂತೆ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡಿದರು. ಈ ಸಂದರ್ಭದಲ್ಲಿ
ಗ್ರಾ ಪಂ ಅಧ್ಯಕ್ಷ ರಾಜಕುಮಾರ ಪೂಜಾರಿ, ಶಿವಲಿಂಗ ಪೂಜಾರಿ, ಕುವೆಂಪು ಮಗದುಮ್ ಪಿಡಿಒ ಬಸವರಾಜ ಬಳೋಜ, ಕಾರ್ಯದರ್ಶಿ ವಿ ಸಿ ಅನಂತಪೂರ,ಕಂದಾಯ ಇಲಾಖೆಯ ಚೇತನ ಗುರವ,ರಕ್ಷಣಾ ಇಲಾಖೆ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾ ಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Share
WhatsApp
Follow by Email