ಬ್ರೇಕಿಂಗ್ ನ್ಯೂಸ್ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ ವತಿಯಿಂದ ನಿರ್ಗತಿಕರಿಗೆ ಹಾಗೂ ಬಡವರಿಗೆ ಮಧ್ಯಾನ್ಹದ ಊಟ, ಬಾಳೆಹಣ್ಣು ಹಾಗೂ ನೀರಿನ ಬಾಟಲ್ ವಿತರಿಸಲಾಯಿತು 06/04/202006/04/2020 admin ರಾಯಬಾಗ : ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಇರುವುದರಿಂದ ರವಿವಾರಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ ವತಿಯಿಂದ ರವಿವಾರ ತಾಲೂಕಿನ ಚಿಂಚಲಿ ಪಟ್ಟಣದಲ್ಲಿರುವ ನಿರ್ಗತಿಕರಿಗೆ ಹಾಗೂ ಬಡವರಿಗೆ ಮಧ್ಯಾನ್ಹದ ಊಟ, ಬಾಳೆಹಣ್ಣು ಹಾಗೂ ನೀರಿನ ಬಾಟಲ್ ವಿತರಿಸಲಾಯಿತು.ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ ರಾಜ್ಯಾಧ್ಯಕ್ಷ ಅಬ್ಬಾಸ ಮುಲ್ಲಾ ಊಟ ವಿತರಿಸಿ ಮಾತನಾಡಿ ಕೊರೋನಾ ಮಹಾಮಾರಿ ಭಯಂಕರ ರೋಗದಿಂದ ದೇಶವೇ ಲಾಕ್‌ಡೌನವಾದ ಹಿನ್ನಲೆಯಲ್ಲಿ ನಿರ್ಗತಿಕರ ಹಾಗೂ ಬಡವರ ಪರಿಸ್ಥತಿ ಭಯಂಕರ ದುಸ್ಥರವಾಗಿದೆ ಎಷ್ಟೋಜನರು ತುತ್ತು ಕುಳಿಗಾಗಿ ತೊಂದರೆ ಪಡುತ್ತಿದ್ದಾರೆ ಇದನ್ನು ಮನಗಂಡು ನಮ್ಮ ಸಂಘಟನೆಯ ವತಿಯಿಂದ ಚಿಂಚಲಿ ಪಟ್ಟಣದಲ್ಲಿರುವ ಸುಮಾರು ಒಂದು ಸಾವಿರ ಬಡ, ನಿರ್ಗತಿಕ ಜನರಿಗೆ ಉಚಿತ ಊಟವನ್ನು ನೀಡುತ್ತಿದ್ದೇವೆಂದು ಹೇಳಿದರು.ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ ರಾಜ್ಯಾಧ್ಯಕ್ಷ ಅಬ್ಬಾಸ ಮುಲ್ಲಾ, ಹರುಣ ತರಡೆ, ಅಮರ ದೇಸಾಯಿ, ಸುಮೀತ ಶೆಟ್ಟಿ, ಸಂತೋಷ ಕುಡಚೆ, ಅಂಕಿತ ಜೊಲ್ಲಾಪೂರೆ, ಸಲೀಮ ನದಾಫ, ಫಿರೋಜ ಮಕಾಂದಾರ, ವಿಶ್ವನಾಥ ಭಿರಡೆ ಸೇರಿದಂತೆ ಅನೇಕರು ಇದ್ದರು Share