ಬ್ರೇಕಿಂಗ್ ನ್ಯೂಸ್ ಅರಬಾಂವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ದಿಂದ ಉಚಿತ ನಂದಿನಿ ಹಾಲನ್ನು ವಿತರಣೆ 07/04/202007/04/2020 admin ಮೂಡಲಗಿ: ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅರಬಾವಿ ಕ್ಷೇತ್ರದ ಪಟ್ಟಣ ಪಂಚಾಯತಿಗಳಾದ ಅರಬಾವಿ, ಕಲ್ಲೋಳಿ ಹಾಗೂ ನಾಗನೂರ ಪಟ್ಟಣದ ಬಡ ಕುಟುಂಬಗಳು ಮತ್ತು ಕೊಳಗೇರಿ ನಿವಾಸಿಗಳಿಗೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ ೨೪೫೦ ಲೀಟರ್ ನಂದಿನಿ ಹಾಲನ್ನು ಉಚಿತವಾಗಿ ವಿತರಿಸಲು ಸೂಚನೆ ನೀಡಿದ್ದಾರೆ ಎಂದು ಯುವ ಧುರೀಣ ನಾಗೇಶ ಶೇಖರಗೋಳ ತಿಳಿಸಿದರು.ಅರಬಾಂವಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ದಿಂದ ಉಚಿತ ನಂದಿನಿ ಹಾಲನ್ನು ವಿತರಿಸಿ ಮಾತನಾಡಿದ ಅವರು, ಎಪ್ರೀಲ್ ೧೪ರವರೆಗೆ ತಾಲೂಕಿನ ಎಲ್ಲ ಪಟ್ಟಣ ಪಂಚಾಯತ ವ್ಯಾಪ್ತಿಯ ಬಡ ಕುಟುಂಬಗಳಿಗೆ ಉಚಿತವಾಗಿ ಒಂದು ಲೀಟರ್ ಹಾಲನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.ಅರಬಾವಿಯಲ್ಲಿ ಸಾವಿರ ಕುಟುಂಬಗಳು, ಕಲ್ಲೋಳಿಯಲ್ಲಿ ೭೫೦ ಕುಟುಂಬಗಳು ಮತ್ತು ನಾಗನೂರಿನಲ್ಲಿ ೭೦೦ ಕುಟುಂಬಗಳಿಗೆ ಒಂದು ಲೀಟರ್ ಹಾಲು ವಿತರಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸೂಚಿಸಿದ್ದಾರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಬೆಳಿಗ್ಗೆ ಸ್ಲಂ ನಿವಾಸಿಗಳ ಮನೆ ಬಾಗಿಲಿಗೆ ನಂದಿನಿ ಹಾಲು ವಿತರಣೆ ಮಾಡುವ ಕಾರ್ಯ ಆರಂಭವಾಗಿದೆ ಎಂದು ಹೇಳಿದರು.ಮುಖಂಡರಾದ ಶಂಕರ ಬಿಲಕುಂದಿ, ನಿಂಗಪ್ಪ ಕುರಬೇಟ, ಮುತ್ತೇಪ್ಪ ಜಲ್ಲಿ, ಗಣಪತಿ ಇಳಿಗೇರ, ರಮೇಶ ಮಾದರ, ರಾಯಪ್ಪ ಬಂಡಿವಡ್ಡರ, ಕುಮಾರ ಪೂಜೇರಿ, ಮುಖ್ಯಾಧಿಕಾರಿ ಕೆ.ಬಿ.ಬೆಣ್ಣಿ, ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಲ್ಲೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸ್ಲಂ ಪ್ರದೇಶಗಳಲ್ಲಿ ನಂದಿನಿ ಹಾಲನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಬಿಜೆಪಿ ಬೆಳಗಾವಿ ವಿಭಾಗಿಯ ಪ್ರಭಾರಿ ಈರಪ್ಪ ಕಡಾಡಿ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ನೀಲಕಂಠ ಕಪಲಗುದ್ದಿ, ರಾವ್‌ಸಾಬ ಬೆಳಕೂಡ, ಮಹಾಂತೇಶ ಕಪಲಗುದ್ದಿ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಬಿ.ಬಿ.ದಾಸನವರ, ಅಶೋಕ ಮಕ್ಕಳಗೇರಿ, ಬಸು ಯಾದಗೂಡ, ಎನ್.ಎಸ್.ಎಫ್ ಅತಿಥಿ ಗೃಹದ ಲಕ್ಕಪ್ಪ ಲೋಕುರಿ, ಮಲ್ಲಪ್ಪ ಕಡಾಡಿ, ಈರಪ್ಪ ಹೆಬ್ಬಾಳ, ಮಹಾದೇವಿ ಬಿ.ಪಾಟೀಲ, ಮುಖ್ಯಾಧಿಖಾರಿ ಅರುಣಕುಮಾರ ಮತ್ತಿತರು ಇದ್ದರು.ನಾಗನೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ಹಾಲು ವಿತರಣೆಯಲ್ಲಿ ಪ್ರಭಾ ಶುಗರ್ ನಿರ್ದೇಶಕ ಕೆ.ಎಸ್.ಪಾಟೀಲ, ಪಿ.ಎಲ್.ಬಬಲಿ, ಬಿಮನಗೌಡ ಹೊಸಮನಿ, ಬಸವರಾಜ ಹಳಿಗೌಡ್ರ, ಎನ್.ಎಸ್.ಎಫ್ ಅತಿಥಿಗೃಹದ ದಾಸಪ್ಪ ನಾಯಿಕ, ಮಾರುತ್ತಿ ಕರಬನ್ನವರ, ಗಂಗಪ್ಪ ಸುಲಧಾಳ, ದುಂಡಪ್ಪ ನಂದಗಾವಿ, ಮುಖ್ಯಾಧಿಕಾರಿ ರವಿ ರಂಗಸೂಬೆ ಸೇರಿದಂತೆ ಮತ್ತಿತರರು ಇದ್ದರು. Share