ಬ್ರೇಕಿಂಗ್ ನ್ಯೂಸ್ ಕಡು ಬಡ ಕೈಮಗ್ಗ ನೇಕಾರರಿಗೆ ಆಹಾರ ಕಿಟ್ ವಿತರಣೆ: ಪೂಜಾ ಕಲ್ಯಾಣಶೆಟ್ಟಿ, 07/04/202007/04/20201 min read admin ಮಹಾಲಿಂಗಪುರ: ಪಟ್ಟಣದ ಡಚ್ ಕಾಲನಿಯ ಕಡು ಬಡ ಕೈಮಗ್ಗ ನೇಕಾರರಿಗೆ ಸ್ಥಳೀಯ ಜ್ಞಾನದೀಪ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಯುವತಿಯರು ಆಹಾರ ಕೀಟ್‌ಗಳನ್ನು ವಿತರಿಸಿದರು.ಜ್ಞಾನದೀಪ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷೆ ದೀಪಾ ತಟ್ಟಿಮನಿ ಮಾತನಾಡಿ ಕೊರೊನಾ ವೈರಸ್‌ನಿಂದಾಗಿ ಭಾರತ್ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಯುವತಿಯರು ಸೇರಿ ಪ್ರಾರಂಭಿಸಿದ ನಮ್ಮ ಸಂಸ್ಥೆಯ ಎಲ್ಲಾ ಸದಸ್ಯರು ಸೇರಿಕೊಂಡು ಡಚ್ ಕಾಲನಿಯ ಕಡುಬಡವರಿಗೆ ನಮ್ಮ ಅಳಿಲು ಸೇವೆಯಾಗಿ ಆಹಾರ ಕಿಟ್ ವಿತರಿಸಿದ್ದೇವೆ. ಇಂತಹ ಸಮಯದಲ್ಲಿ ಸಮಾಜದಲ್ಲಿನ ಉಳ್ಳವರು ಮತ್ತು ಸಂಘ ಸಂಸ್ಥೆಗಳು ಸಮಾಜದಲ್ಲಿನ ಕಡು ಬಡವರಿಗೆ, ನಿರ್ಗತಿಕರಿಗೆ,ಸ್ಲಂ ನಿವಾಸಿಗಳಿಗೆ ತಮ್ಮ ಕೈಲಾದ ಸಹಾಯ-ಸಹಕಾರ ಸಲ್ಲಿಸಬೇಕು ಎಂದರು.ಡಚ್ ಕಾಲನಿಯ 60ಕ್ಕೂ ಅಧಿಕ ಕಡುಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.ಜ್ಞಾನದೀಪ ಗ್ರಾಮೀಣ ಅಭಿವೃದ್ದಿ ಸಂಸ್ಥೆಯ ಸದಸ್ಯರಾದ ಪೂಜಾ ಕಲ್ಯಾಣಶೆಟ್ಟಿ, ಸುನಂದಾ ಕಿಶೋರಿ, ಡಚ್ ಕಾಲನಿ ಹಿರಿಯರಾದ ಚನ್ನಪ್ಪ ರಾಮೋಜಿ, ಗುರುಪಾದ ಅಂಬಿ, ಸದಾಶಿವ ಜಿಡ್ಡಿಮನಿ, ಪುರಸಭೆ ಸದಸ್ಯ ರವಿ ಜವಳಗಿ, ಯುವಕರಾದ ಅಭಿ ಲಮಾಣಿ, ಮಹಾಲಿಂಗ ಲಮಾಣಿ ಸೇರಿದಂತೆ ಹಲವರು ಇದ್ದರು. Share