ಪತಿಯನ್ನು ಕೊಂದು ನದಿಯಲ್ಲಿ ಎಸೆದ ಪತ್ನಿ ಹಾಗೂ ಪ್ರಿಯಕರನ ಬಂಧಿಸಿದ ಪೊಲೀಸರು

ಪ್ರಿಯಕರನ ಜೊತೆಗೂಡಿ ಪತಿಯನ್ನೇ ಕೊಲೈಗೈದ ಪತ್ನಿ
ಬೆಳಗಾವಿ: ಪ್ರಿಯಕರ ಜೊತೆ ಸೇರಿ ಪತಿಯನ್ನು ಕೊಲೈಗೈದ ಆರೋಪಿಗಳನ್ನು ಬಂಧಿಸುವಲ್ಲಿ ಗೋಕಾಕ ಪೋಲಿಸರು ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ಮಾರ್ಚ 24 ರಂದು ಮಾಣಿಕವಾಡಿಯ ಅಪ್ಪಣ್ಣ ಸಂಭಾಜಿ ಸನದಿ (40) ಮೃತ ದುರ್ದೈವಿ.
ಅಪ್ಪಣ್ಣ ಪತ್ನಿ ಯಲ್ಲವ್ವ (31) ಮೆಳವಂಕಿಯ ಆಕೆಯ ಪ್ರಿಯಕರ ವಿರುಪಾಕ್ಷಿ ಮಠಪತಿ ಜತೆ ಅನೈತಿಕ ಸಂಬಂಧ ಹೊಂದಿದ್ದು, ಇಬ್ಬರೂ ನಗರದ ಖಾಸಗಿ ಕಂಪನಿಯ ಶೋರೂಮನಲ್ಲಿ ಕಾರ್ಯನಿರ್ವಹಿಸತ್ತಿದ್ದರು.
ಅನೈತಿಕ ಸಂಬಂಧ ಪತಿ ಅಪ್ಪಣ್ಣನಿಗೆ ತಿಳಿದು ಪತ್ನಿ ಯಲ್ಲವ್ವಳಿಗೆ ಹೊಡಿದಿದ್ದ. ಕಾರಣ ಯಲ್ಲವ್ವ ಹಾಗೂ ವಿರುಪಾಕ್ಷಿ ಅಪ್ಪಣ್ಣನನ್ನು ಕೊಲೈಗೈಯ್ಯಲು ತೀರ್ಮಾನಿಸಿ, ಮಾರ್ಚ 24 ರಂದು ತಾಲೂಕಿನ ಬಿಲಕುಂದಿ ಗ್ರಾಮದ ದುಂಡಪ್ಪ ಸಿದ್ದಪ್ಪ ಕಪರಟ್ಟಿ ಅವರ ಹೊಲಕ್ಕೆ ಅಪ್ಪಣ್ಣನ್ನು ಕರೆದೊಯ್ದು ಅಪ್ಪಣ್ಣನ ಮರ್ಮಾಂಗಕ್ಕೆ ಒದ್ದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಕೊಲೆಯ ಸಾಕ್ಷಿ ನಾಶಪಡಿಸಿ, ಪ್ರಕರಣ ದಾರಿತಪ್ಪಿಸಲು ಬಿಲಕುಂದಿ ಗ್ರಾಮದಿಂದ ಮೋಟಾರು ಸೈಕಲ್ ಮೇಲೆ ತೆಗೆದುಕೊಂಡು ನಗರದ ಸಮೀಪದ ಶೆಟ್ಟೆವ್ವನ ತೋಟದ ಘಟಪ್ರಭಾ ನದಿಯಲ್ಲಿ ಮೃತ ಅಪ್ಪಣ್ಣನ ಬಟ್ಟೆ ಬಿಚ್ಚಿ ಎಸೆದಿದ್ದಾರೆ. ಅಲ್ಲದೇ ಈ ಕೊಲೆಯ ಬಗ್ಗೆ ಎಲ್ಲಾದರೂ ಬಾಯ್ಬಿಟ್ಟಲ್ಲಿ ನಿನ್ನನ್ನು ಸಹ ಕೊಲೆ ಮಾಡುವದಾಗಿ ರವಿಗೆ ಬೆದರಿಕೆಯೊಡ್ಡಿದ್ದಾರೆ.
ಮಾರ್ಚ 24ರಂದು ರಾತ್ರಿ ಯಲ್ಲವ್ವ ನಗರ ಠಾಣೆಯಲ್ಲಿ ಅಪ್ಪಣ್ಣ ಕಾಣೆಯಾಗಿರುವದಾಗಿ ದೂರು ನೀಡಿದ್ದಳು, ನಂತರ ದಿ.26 ರಂದು ಘಟಪ್ರಭಾ ನದಿಯಲ್ಲಿ ಮೃತ ಅಪ್ಪಣ್ಣನ ಶವ ನೀರಿನಲ್ಲಿ ತೇಲುತ್ತಿರುವದನ್ನು ಗಮನಿಸಿದ ಪೋಲಿಸರು ಶವವನ್ನು ಹೊರಕ್ಕೆ ತೆಗೆದು ಸರಕಾರಿ ಆಸ್ಪತ್ರೆಯಲ್ಲಿ ಪಂಚನಾಮೆ ಮಾಡಿ ಶವವನ್ನು ಪತ್ನಿಗೆ ಹಸ್ತಾಂತರಿಸಿದ್ದರು. ಮೃತ ಅಪ್ಪಣ್ಣನ ತನಿಖೆ ನಡೆಸಿದ್ದ ಪೋಲಿಸರಿಗೆ ಯಲ್ಲವ್ವ ಹಾಗೂ ವಿರುಪಾಕ್ಷ ನಡುವಿನ ಅನೈತಿಕ ಸಂಬಂಧದ ಹಿನ್ನಲೆ ಅಪ್ಪಣ್ಣನ ಕೊಲೆ ಮಾಡಿರುವದಾಗಿ ಖಂಡ್ರಟ್ಟಿ ಗ್ರಾಮದ ರವಿ ಬಡಿಗವಾಡ ದೂರು ನೀಡಿದ ಹಿನ್ನೆಲೆ ಬೆಳಗಾವಿ ಎಸ್‍ಪಿ ಲಕ್ಷ್ಮಣ ನಿಂಬರಗಿ, ಡಿಎಸ್‍ಪಿ ಪ್ರಭು ಡಿ ಟಿ, ನೇತ್ರತ್ವದಲ್ಲಿ ಸಿಪಿಐ ಗೋಪಾಲ ರಾಠೋಡ, ಶಹರ ಠಾಣೆ ಪಿಎಸ್‍ಐ ಎ.ಟಿ. ಅಮ್ಮಿನಭಾಂವಿ ಅವರ ಸಾರಥ್ಯದಲ್ಲಿ ಶಿವಾನಂದ ಕಸ್ತೂರಿ, ಅಶೋಕ ಶಾಂಡಗೆ, ಮಂಜುನಾಥ ದೇಶನೂರ, ಶಿವಾನಂದ ದೇಸಾಯಿ, ಫಕೀರಗೌಡ ಪಾಟೀಲ ಸೇರಿದಂತೆ ಇನ್ನು ಹಲವು ನಗರ ಪೊಲೀಸ್‌ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕರೋನಾ ಮಹಾಮಾರಿ ಹಿನ್ನಲೆ ಸರಕಾರ ಲಾಕ್ ಡೌನ್ ಹೊರಡಿಸಿದ್ದು, ಲಾಕ್ ಡೌನ್ ಕಾರ್ಯದ ನಡುವೆಯೂ ಈ ಪ್ರಕರಣವನ್ನು ಬೇಧಿಸಿದ್ದನ್ನು ಸಾರ್ವಜನಿಕರು ಪ್ರಶಂಸಿಸಿದ್ದಾರೆ.
Share
WhatsApp
Follow by Email