ಮಾನವೀಯತೆ ಮೆರೆದ ಮುಸ್ಲಿಂ ಸಮಾಜದವರು 500 ಜನ ಬಡ ಕುಟುಂಬಗಳಿಗೆೆ ಆಹಾರ ಧಾನ್ಯ ವಿತರಣೆ..!!

ಬೈಲಹೊಂಗಲ : ಒಂದೆಡೆ ಜಾತಿ, ಜಾತಿ ಎಂದು ಕಿತ್ತಾಡುತ್ತಿರುವ ಈ ಸಂದರ್ಭದಲ್ಲಿ ಜಾತಿ, ಬೇದ ಭಾವ ಮರೆತು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮುಸ್ಲಿಂ ಸಮಾಜದವರು ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ರೆಹಮಾನ ಪೌಂಡೇಶನ್ ಹಾಗೂ ಖೀದಮತೆ ಎ-ಖಲಕ್ ದಿಂದ ಪಟ್ಟಣ ಹಾಗೂ ತಾಲೂಕಿನ 500 ಜನ ಬಡ ಜನರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಾಮಾಜಿಕ ಕಾರ್ಯಕರ್ತ ರಫೀಕ ಬಡೇಘರ ಮಾತನಾಡಿ, 21 ದಿನ ಲಾಕಡೌನ ಘೋಷಿಸಿರುವ ಹಿನ್ನಲೆ ಬಡ ಕೂಲಿ ಕಾರ್ಮಿಕರಿಗೆ ಕಷ್ಟದ ಪರಿಸ್ಥಿತಿ ಅನುಭವಿಸುತ್ತಿದ್ದು, ಹಂತವರ ನೆರವಿಗೆ ನಿಲ್ಲುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ. ಯಾವುದೇ ಹಿಂದೂ, ಮುಸ್ಲಿಂ, ಕ್ರೆöÊಸ್ತ ಎಂಬ ಜಾತಿ, ಧರ್ಮ ವಿಲ್ಲದೇ ಎಲ್ಲ ಜನಾಂಗದವರಿಗೆ ವಿತರಿಸಲಾಗುತ್ತಿದೆ. ಈ ಹಿಂದೆ ಭೀಕರ ಪ್ರವಾಹ ಬಂದಾಗ ಕೂಡಾ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಗಿತ್ತು. ಇದು ಮನುಷ್ಯತ್ವ ಧರ್ಮ ಎಲ್ಲರೂ ತಮ್ಮ ತಮ್ಮ ಮನೆ ಪಕ್ಕದಲ್ಲಿರುವ ಕಡು ಬಡವರಿಗೆ ಸಹಾಯ ಸಹಕಾರ ಮಾಡುವಂತೆ ತಿಳಿಸಿದರು. ಸರಕಾರದ ಆದೇಶಗಳನ್ನು ಪಾಲಿಸಿ, ಅನಾವಶ್ಯಕ ಹೊರಗಡೆ ಬರಬೇಡಿ ಎಂದು ವಿನಂತಿಸಿದರು. ನ್ಯಾಯವಾದಿ ಆಲಮ್ ಕಾರೆಕಾಜಿ ಮಾತನಾಡಿ, ಪರೋಪಕಾರ ಮೈಗೂಡಿಸಿಕೊಂಡು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬೇಕು. ದೇಶಕ್ಕೆ ಗಂಡಾAತರ ಬಂದಾಗ ಪ್ರತಿಯೊಬ್ಬರು ಜಾತಿ, ಮತ, ಪಂಥ ಮರೆತು ಸೇವೆ ಸಲ್ಲಿಸಬೇಕು. ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಕೂಡಿ ಬಾಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಜಮೀಲ ಪಿರಜಾದೆ, ಸುಲೇಮಾನ ನೇಸರಗಿ, ಅಶ್ರಫ ಪಟ್ಟಿಹಾಳ, ಮುಜಮಿಲ್ ಮುಜಾವರ, ಸಾಧೀಕ ಪಟ್ಟಿಹಾಳ, ಇಮ್ತಿಯಾಜ ಮುಲ್ಲಾ, ರುಪ್ತುಂ ಮುಜಾವರ, ಪುರಕಾನ ಶಿರಸಂಗಿ, ಅಪ್ತಾಪ ನೇಸರಗಿ, ಅನ್ಸಾರ ಅತ್ತಾರ, ಇಲಿಯಾಸ ಹುಬ್ಬಳ್ಳಿ, ಇನಾಯತ ಕರೀಕಟ್ಟಿ ಉಪಸ್ಥಿತರಿದ್ದರು.
Share
WhatsApp
Follow by Email