ಕರೋನಾ ವೈರಸ್ ತಡೆಗಟ್ಟಲು ಕಾಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನಾವು ಋಣಿಯಾಗಿರಬೇಕು : ಕರೇಪ್ಪ

ಅರಟಾಳ ; ಕರೋನಾ ವೈರಸ್ ತಡೆಗಟ್ಟಲು ಮುಂಜಾಗೃತವಾಗಿ ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ. ಆರೋಗ್ಯ, ಪೋಲಿಸ್, ಪಂಚಾಯತ ರಾಜ್ಯ ಇಲಾಖೆ ಮತ್ತು ಪತ್ರಿಕೆಗಳು ನಮ್ಮ ರಕ್ಷಣೆಗಾಗಿ ಸಾಕಷ್ಟು ಕೆಲಸ ಮಾಡುತ್ತಿವೆ. ಅವರಿಗೆ ನಾವು ಋಣಿಯಾಗಿರಬೇಕು ಎಂದು ಪಿಕೆಪಿಎಸ್ ಉಪಾಧ್ಯಕ್ಷ ಕರೇಪ್ಪ ಶಿವಪ್ಪ ಹಟ್ಟಿ ಹೇಳಿದರು.
ಗ್ರಾಮದಲ್ಲಿ ಗುರುವಾರ ಸಾರ್ವಜನಿಕರಿಗೆ ಉಚಿತವಾಗಿ ೫೦೦ ಮಾಸ್ಕ ವಿತರಿಸಿ ಮಾತನಾಡಿ, ಕೊರಾನ್ ವೈರಸ್ ಬಗ್ಗೆ ಯಾರಲು ಭಯಬೇಡಾ, ಎಲ್ಲರು ಎಚ್ಚರವಹಿಸಿದರೆ ಸಾಕು ಕರೋನಾ ವೈರಸ್ ತಗುಲುವುದಿಲ್ಲ. ಈಗಾಗಲ್ಲೇ ಗ್ರಾಮ ಪಂಚಾಯತ ವ್ಯಾಪ್ತಿಯ ಮೂರು ಗ್ರಾಮಗಳಿಗೆ ಮುಂಜಾಗೃತವಾಗಿ ಪಾಗಿಂಗ ಮೂಲಕ ಔಷಧಿ ಸಿಂಪಡಿಸಿದ್ದಾರೆ. ಸರ್ಕಾರ ಹೇಳುವಂತೆ ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳುವುದು ಅವಶ್ಯ. ಲಾಕ್ ಡೌನ್ ಮುಗಿಯುವವರೆಗೆ ಮನೆಯಲ್ಲಿ ಎಲ್ಲರು ಕಾಲ ಕಳೆಯಿರಿ ಎಂದರು.
ಕಾರ್ಯದರ್ಶಿ ಜೀತೇಂದ್ರ ಗದಾಡೆ, ಗ್ರಾಪಂ ಸದಸ್ಯ ಹಣಮಂತ ಪೂಜಾರಿ, ಮಾಳಪ್ಪ ಕಾಂಬಳೆ, ಮಲ್ಲಿಕಾರ್ಜುನ ತೆಲಸಂಗ, ಶ್ರೀಶೈಲ ಪೂಜಾರಿ, ಕರೆಪ್ಪ ಹಿರೇಕುರಬರ, ಹಣಮಂತ ಹಟ್ಟಿ, ಬಸಪ್ಪ ತೆಲಸಂಗ, ನಾರಾಯಣ ವಡ್ಡರ, ಎಮ್. ಪಿ. ಪಾಟೀಲ, ಆಶಾ ಕಾರ್ಯಕರ್ತೆ ದ್ರಾಕ್ಷಾಯಣಿ ಕಾಂಬಳೆ, ವಿಜಯಲಕ್ಷ್ಮೀ ಇದ್ದರು.
Share
WhatsApp
Follow by Email