ಬ್ರೇಕಿಂಗ್ ನ್ಯೂಸ್ ಚಿಕ್ಕೋಡಿಯಲ್ಲಿ ಕರೋನಾ ವೈರಾಣು ಹರಡುವಿಕೆ ತಡೆಗಟ್ಟುವ ನೈರ್ಮಲಿಕರಣ ಮೂರು ಘಟಕಗಳ ಉದ್ಘಾಟನೆ 09/04/202009/04/2020 admin ಚಿಕ್ಕೋಡಿ ನಗರದಲ್ಲಿ ಜೊಲ್ಲೆ ಉದ್ಯೋಗ ಸಮೂಹ, ಪುರಸಭೆ ಚಿಕ್ಕೋಡಿ ಹಾಗೂ ಕೇಶವ ಸ್ಮೃತಿ ಟ್ರಸ್ಟ್ ಚಿಕ್ಕೋಡಿ, ಇವರ ಸಂಯುಕ್ತ ಆಶ್ರಯದಲ್ಲಿ ನಿರ್ಮಿಸಿದ ಕೊರೋನಾ ವೈರಾಣು ಹರಡುವಿಕೆ ತಡೆಗಟ್ಟುವ ನೈರ್ಮಲಿಕರಣ ಘಟಕಗಳನ್ನು ಜ್ಯೋತಿ ಬಜಾರ ಹತ್ತಿರ ,ಸಾರ್ವಜನಿಕ ಆಸ್ಪತ್ರೆಯ ಬರುವ ಎಲ್ಲಾ ರೋಗಿಗಳಿಗೆ ಹಾಗೂ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರಿಗೆ ಅನುಕೂಲ ಆಗುವ ದ್ರಷ್ಟಿಯಿಂದ ಮತ್ತು ಚಿಕ್ಕೋಡಿ ಪುರಸಭೆಯ ಮುಂದೆ ಈ ರೀತಿಯಾಗಿ ಮೂರು ಘಟಕಗಳನ್ನುಕರ್ನಾಟಕ ಸೌಹಾರ್ದ ಫೆಡರೇಶನ್ ಉಪಾಧ್ಯಕ್ಷರಾದ ಶ್ರೀ ಜಗದೀಶ್ ಕವಟಗಿಮಠ , ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಬಸವಪ್ರಸಾದ ಜೊಲ್ಲೆ ಯವರು ಉದ್ಘಾಟಿಸಿದರು.ಬಸವಪ್ರಸಾದ ಜೊಲ್ಲೆ ಮಾತನಾಡಿ ದೇಶದಾದ್ಯಂತ ಮತ್ತು ನಮ್ಮ ರಾಜ್ಯದಲ್ಲಿ ಕೂಡ ಕೊರೋನಾ ವೈರಸ್ ಮಹಾಮಾರಿ ಹಾವಳಿ ಹೆಚ್ಚಾಗಿದ್ದರಿಂದ ಎಲ್ಲರಿಗೂ ಸ್ಯಾನಿಟೈಜರ್ ಮುಖ್ಯ. ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲಿಸರು ವೈದ್ಯರು, ಹಾಗೂ ಪೌರಕಾರ್ಮಿಕರು ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆಂದು ಅವರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳಗಾವಿ ವಿಭಾಗದ ಸಹಕಾರ್ಯನಿಹರಾದ ಸಂಜಯ ಅಡಕೆ ಉಪವಿಭಾಗಾಧಿಕಾರಿ ರವೀಂದ್ರ ಕರಿಲಿಂಗಣ್ಣವರ, ಡಿವೈಎಸ್ಪಿ ಮನೋಜಕುಮಾರ್ ನಾಯಿಕ, ತಾಲೂಕು ವೈದ್ಯಾಧಿಕಾರಿ ವಿಠ್ಠಲ ಶಿಂಧೆ, ಸಿಎಂಒ ಸಂತೋಷ್ ಕುಣ್ಣೂರೆ, ಪುರಸಭೆ ಸದಸ್ಯರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. Share