ಬ್ರೇಕಿಂಗ್ ನ್ಯೂಸ್ ರಾಯಬಾಗ: ರಾಯಬಾಗ ತಾಲೂಕಿನ ಇಟನಾಳ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನಕಲುಕುವ ಘಟನೆ ನಡೆದಿದೆ 09/04/202009/04/2020 admin ಇಟನಾಳ : ಗ್ರಾಮದ ಹದ್ದಿನಲ್ಲಿ ಇರುವ ಮುಗಳಖೋಡ ಕೆನಾಲ್ ಕಚೇರಿ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಹಾಕಿರುವ ಅಮಾನವೀಯ ಘಟನೆ ನಡೆದಿದೆ.ಆ ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾಕಾಯ೯ಕರ್ತೆಯರು, ಆರೋಗ್ಯ ಕೇಂದ್ರದ ನಸ್೯, ಆರಕ್ಷಕ ಠಾಣೆ ಸಿಬ್ಬಂದಿ ಭೇಟಿ ನೀಡಿ ಆ ಕಂದಮ್ಮನ ರಕ್ಷಣೆಯಲ್ಲಿ ತೊಡಗಿದ್ದಾರೆ. ಈ ಘಟನೆಯನ್ನು ಪರಿಶೀಲಿಸಿ ಮಗುವನ್ನು ಸಂಬಂಧಿಸಿದವರಿಗೆ ಹಸ್ತಾಂತರ ಮಾಡುವ ಕೆಲಸ ಮಾಡುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸ್ಥಳೀಯ ಜನರನ್ನು ಆ ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಬೆಳಿಗ್ಗೆ 3:00ಗಂಟೆ ಸುಮಾರಿಗೆ ಈ ಗಂಡು ಮಗವನ್ನು ಹಾಕಿ ಹೋಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.ಸದ್ಯ ಈ ಕಂದಮ್ಮನ ರಕ್ಷಣೆ ಆಶಾ ಕಾರ್ಯಕರ್ತರು ಹಾಗೂ ಸ್ಟಾಪ್ ನರ್ಸ ಅವರು ರಾಯಬಾಗ ತಾಲೂಕಾ ಆಸ್ಪತ್ರೆಗೆ ಆ ಮಗುವನ್ನು ಹಸ್ತಾಂತರಿಸಲಾಯಿತು. ಈ ಘಟನೆ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. Share