ಬ್ರೇಕಿಂಗ್ ನ್ಯೂಸ್ ಬೆಳಗಾಂವಿ ಉಸ್ತುವಾರಿ : ಅದಲ್…ಬದಲ್… 09/04/202009/04/20201 min read admin ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆದ ಜಗದೀಶ್ ಶೆಟ್ಟರ್…ಬೆಳಗಾವಿ- ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಉಸ್ತುವಾರಿ ಸಚಿವರನ್ನು ಅದಲು ಬದಲು ಮಾಡಿ, ಹೊಸ ಪಟ್ಟಿ ಬಿಡುಗಡೆ ಮಾಡಿದ್ದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಗದೀಶ್ ಶೆಟ್ಟರ್ ಅವರೇ ಮುಂದುವರೆದಿದ್ದಾರೆ.ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡುವ ಜೊತೆಗೆ,ಧಾರವಾಡ ಜಿಲ್ಲೆಯ ಅಧಿಕ ಪ್ರಭಾರ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.ಗುರುವಾರ ಬೆಳಿಗ್ಗೆಯಿಂದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗುವ ನಿರೀಕ್ಷೆ ಇತ್ತು ಆದ್ರೆ ಸಿಎಂ ಯಡಿಯೂರಪ್ಪ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲು ಮಾಡದೇ ಶೆಟ್ಟರ್ ಅವರನ್ನೇ ಮುಂದುವರೆಸಿದ್ದಾರೆ. Share