ದಿನನಿತ್ಯ ದುಡಿದರೆ ಜೀವನ ನಡೆಸುವದು ಕಷ್ಟ, ಲಾಕ್ಡೌನ್‌ನಿಂದ ಕೆಸಲವಿಲ್ಲದೆ ಬದುಕು ನಡೆಸುವದು ದುಸ್ಥೀರ. ಕೆಲಸವಿಲ್ಲದೆ ಕಷ್ಟದ ಜೀವನ ನಡೆಸುತ್ತೀರುವ ಕುಶಲಕರ್ಮಿಗಳು

ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೇ ವಿಶೇಷ.
ಮುದ್ದೇಬಿಹಾಳ : ಜಗತ್ತೀನಲ್ಲಿ ಪ್ರತಿಯೋಬ್ಬ ಮಾನವನ ಕಾಲಿಗೆ ಹಾಕಿಕೋಳ್ಳುವ ಪಾದರಕ್ಷೇಗಳನ್ನು ತಯಾರು ಮಾಡುವ ಮತ್ತು ಹರಿದ ಪಾದರಕ್ಷೇಗಳನ್ನು ಹೊಲಿಯುವ ಚರ್ಮಗಾರಿಕೆಯನ್ನು ಮಾಡುವರ ಬದುಕು ಮಾತ್ರ ಬೇತ್ತಲೆ. ಹಗಲಿರುಳು ಪಾದರಕ್ಷೆಗಳನ್ನು ಹೋಲಿದು ಜನರ ಮಾನ ಮತ್ತು ಪಾದಗಳಿಗೆ ಶ್ರೀರಕ್ಷೆ ಕೊಡುವ ಶ್ರಮಜೀವಿ ಚರ್ಮಗಾರಿಕೆ ನಡೆಸುವರ ಬದುಕು ಪರರಿಗೆ ಆದರ್ಶ ಹೊಟ್ಟೇಗೆ ತಣ್ಣಿರು ಬಟ್ಟೆ , ಸದಾಕಾಲ ದುಡಿದರು ಸೂಕ್ತ ದುಡಿಮೆ ದೊರೆಯದೆ ಬದುಕು ದುಸ್ತರವಾದ ಕಾಲಕ್ಕೆ ಕರೋನಾ ವೈರಸ್ ಅಟ್ಟಹಾಸದಿಂದ ಮತ್ತಷ್ಟು ಬದುಕು ನಡೆಸುವದು ಚಿಂತಕ್ರಾoತವಾಗಿದೆ.
ಉತ್ತರ ಕರ್ನಾಟಕದಲ್ಲಿಯೇ ಅತಿ ಹೇಚ್ಚು ಪಾದರಕ್ಷೆಗಳನ್ನು ಕೈಗಳಿಂದಲೇ ತಯಾರಾಗುತ್ತವೆ ಇಲ್ಲಿನ ರೈತರು ಚರ್ಮದ ಪಾದರಕ್ಷೆಗಳನ್ನು ಹಾಕಿಕೊಳ್ಳುವದರಿಂದ ಚರ್ಮಗಾರಿಕೆ ಮಾಡುವರ ಬದುಕು ಸ್ವಲ್ಪ ಮಟ್ಟಿಗೆ ನಡೆಯುತ್ತದೆ, ಮತ್ತು ಸ್ವಂತ ಮನೆಯಲ್ಲಿ ತಯಾರಿಸಿದ ಚರ್ಮದ ಪಾದರಕ್ಷೇಗಳನ್ನು ತಯಾರು ಮಾಡಿಕೊಂಡು ವಿವಿಧ ದೂರದ ಪಟ್ಟಣಕ್ಕೆ ಹೋಗಿ ಮಾರಿಕೊಂಡು ಬಂದ ಹಣದಲ್ಲಿ ಜೀವನ ಮಾಡುವರಿದ್ದಾರೆ. ಮತ್ತು ಸ್ಥಳೀಯ ಪಟ್ಟಣದ ಬಸ್ ನಿಲ್ದಾಣದಲ್ಲಿ ಮತ್ತು ವಿವಿಧ ಭಾಗಗಳಲ್ಲಿ ಹಳೆಯ ಹರಿದ ಪಾದರಕ್ಷೇಗಳನ್ನು ಹೊಲಿದು ಜೀವನ ನಡೆಸುತ್ತೀದ್ದಾರೆ . ಆದರೆ ಕರೋನಾ ವೈರಸ್ ನಿಂದ ಸುಮಾರು 15 ದಿನಗಳ ಕಾಲ ಕೆಸಲವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ, ಇಗ ಇವರ ಬದುಕು ನಡೆಸುವದು ಕಷ್ಟಕರವಾಗಿದೆ. ದಿನದ ಲೇಕ್ಕದಲ್ಲಿ ದುಡಿಯುವ ಇವರುಗಳಿಗೆ ಲಾಕ್ಡೌನ್ ನಿಂದ ಸರಿಯಾಗಿ ತಿನ್ನಲು ಅನ್ನ ಇಲ್ಲದೆ ಪರದಾಡುವಂತಾಗಿದೆ ಎಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತೀದ್ದಾರೆ.
ಅಧಿಕ ಕುಟುಂಬಗಳು ಕಷ್ಟದಲ್ಲಿ.
ಮುದ್ದೇಬಿಹಾಳ , ತಾಳೀಕೋಟಿ , ನಾಲತವಾಡ ಪಟ್ಟಣದಲ್ಲಿ ಹಳೆಯ ಪಾದರಕ್ಷೇಗಳನ್ನು ಹೊಲಿದು ತಮ್ಮ ಜೀವನವನ್ನು ಸಾಗಿಸುತ್ತೀರುವ ಚರ್ಮಗಾರಿಕೆ ಮಾಡುವರ ಬದುಕು ಲಾಕಡೌನ್ ನಿಂದ ದುಡಿಮೆ ಇಲ್ಲದೆ, ಬದುಕು ನಡೆಸುವದು ಕಷ್ಟಕರವಾಗಿದೆ. ಪಟ್ಟಣದಲ್ಲಿ ಸುಮಾರು 100ಕ್ಕೂ ಅಧಿಕ ಕುಟುಂಬಗಳು ಚರ್ಮಗಾರಿಕೆಯನ್ನೇ ನಂಬಿ ಬದುಕು ನಡೆಸುತ್ತೀದ್ದಾವೆ. ಇದರಿಂದ ಬಂದ ದುಡಿಮೆಯನ್ನು ದಿನನಿತ್ಯ ಬದುಕು ನಡೆಸಬೆಕಾಗುತ್ತದೆ. ಸರಕಾರವೇನೂ ಪಡಿತರ ಅಕ್ಕಿಗಳನ್ನು ಉಚಿತವಾಗಿ ನೀಡುತ್ತಾರೆ, ಆದರೆ ಅವರು ಕೊಟ್ಟಂತಹ ರೇಷನ್ ಎಷ್ಟು ದಿನಾ ಬರುತ್ತೇ, ದುಡಿದು ತಿನ್ನುವದೆ ಬೇರೆ ಎಂದು ಚರ್ಮಗಾರಿಕೆ ಮಾಡುವರು ಕೆಲಸವಿಲ್ಲದಕ್ಕೆ ಬೇಸರ ವ್ಯಕ್ತಪಡಿಸುತ್ತೀದ್ದಾರೆ.
ಚರ್ಮಗಾರಿಕೆಗೆ ಸರಕಾರದಿಂದ ಪ್ರೋತ್ಸಾಹದನ ಸಿಗಲಿ.
ಕಡುಬಡತನವನ್ನೇ ನಂಬಿ ಬದುಕು ನಡೆಸುತ್ತೀರುವ ಚರ್ಮಗಾರಿಕೆ ಮಾಡುವರು ಪ್ರತಿಯೊಂದು ಗ್ರಾಮದಲ್ಲಿಯೂ ಸಿಗುತ್ತಾರೆ, ಮತ್ತು ಅದೀಕವಾಗಿ ಪಟ್ಟಣದಲ್ಲಿ ಇವರು ತಮ್ಮ ನೆಲೆಯನ್ನು ಕಂಡುಕೊಳ್ಳಲು ಹರಸಾಹಸ ಪಡುತ್ತಾ, ದಿನಾಲು ಹರಿದ ಪಾದರಕ್ಷೇಗಳನ್ನು ಹೋಲಿದು, ಬಂದ ದುಡಿಮೆಯಲ್ಲಿ ತಮ್ಮ ಬದುಕನ್ನು ನಡೆಸುತ್ತಾರೆ. ಮತ್ತು ಸರಕಾರದಿಂದ ಚರ್ಮಗಾರಿಕೆ ಮಾಡಲು ಒಂದು ಡಬ್ಬಿಯನ್ನು ಕೊಡುವದು ಬಿಟ್ಟರೆ , ಇನ್ನು ಯಾವದೇ ರೀತಿಯಲ್ಲಿ ಇವರಿಗೆ ಸರಕಾರದ ಸೂಕ್ತ ಸೌಲಭ್ಯಗಳು ಸಿಗುತ್ತೀಲ್ಲಾ, ಒಬ್ಬ ದುಡಿದು ಮನೆಯವರು ಎಲ್ಲರು ಸಾಕಬೇಕಾಗುತ್ತದೆ , ಈ ಚರ್ಮಗಾರಿಕೆಯನ್ನು ಮಾಡುವರು ಬಹುಪಾಲು ಜನರು ಮಧ್ಯ ವ್ಯಸನಿಗಳಾಗಿರುತ್ತಾರೆ. ಇದರಿಂದ ಆರ್ಥಿಕವಾಗಿ ಕುಗ್ಗಿರುವ ಈ ಜನಾಂಗಕ್ಕೆ ಸರಿಯಾಗಿ ವಾಸಿಸಲು ಸ್ವಂತ ಮನೆಗಳು ಇಲ್ಲದಿರುವದು ಕೆಲವು ಕಡೆಗಳಿಲ್ಲಿದ್ದಾರೆ . ಸುಮಾರು ಸಾವಿರಾರು ವರ್ಷಗಳಿಂದಲೂ ಇವರು ಬಾಡಿಗೆ ಮನೆಯಲ್ಲಿ ಅಥವಾ ಗುಡಿಸಲಲ್ಲಿ ವಾಸಿಸುವದು ಕಂಡುಬರುತ್ತಿದೆ. ಇದರಿಂದ ಚರ್ಮಗಾರಿಕೆಯನ್ನು ಮಾಡುವರಿಗೆ ಸರಕಾರ ಸೂಕ್ತ ಸೌಲಭ್ಯಗಳನ್ನು ನೀಡಲಿ ಎಂದು ಚರ್ಮಗಾರಿಕೆಯ ವೃತ್ತಿಯವರು ಆಗ್ರಹಸಿದ್ದಾರೆ.
ಬಾಕ್ಸ್ ನ್ಯೂಸ್ : ನಮ್ಮ ಸಮಾಜದಲ್ಲಿ ಬಹುಪಾಲು ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ, ದಿನಾಲು ಪಾದರಕ್ಷೆಗಳನ್ನು ಹೊಲಿದು ಜೀವನ ಮಾಡುವ ನಮಗೆ ಈ ಲಾಕ್ಡೌನ್ ನಿಂದ ಕೆಲಸವಿಲ್ಲದೆ, ಬದುಕು ನಡೆಸುವದು ಕಷ್ಟಕರವಾಗಿದೆ. ಸರಕಾರ ಹೇಚ್ಚಿನ ರೀತಿಯಲ್ಲಿ ದುಡಿದು ಜೀವನ ನಡೆಸುವರಿಗೆ ಆಸರೆಯಾಗಲಿ.ತಾಲೂಕಾ ಅದ್ಯಕ್ಷರು. ಭಗವಂತ ಕಬಾಡೆ. ಶಿವಶೆರಣ ಹರಳಯ್ಯ ಸಮಾಜ ಸೇವಾ ಸಂಘ ಮುದ್ದೇಬಿಹಾಳ
Share
WhatsApp
Follow by Email