ಬ್ರೇಕಿಂಗ್ ನ್ಯೂಸ್ ಬಡ ಕುಟುಂಬಗಳಿಗೆ ತಿಂಗಳ ಪಡಿತರ ಉಚಿತವಾಗಿ ವಿತರಿಸಿದ ವಾಸ್ಟರ್ ಕುಟುಂಬ 10/04/202010/04/2020 admin ಅಥಣಿ: ಭಾರತ ಲಾಕ್ ಡೌನ ಹದಿನಾರನೆಯ ದಿನಕ್ಕೆ ಮುಂದುವರೆದಿದ್ದು ಬಡವರು ನಿರ್ಗತಿಕರಿಗೆ ಅಲ್ಲಲ್ಲಿ ಕೆಲವು ಸಂಘ ಸಂಸ್ಥೆಗಳು ಆಹಾರ ವಿತರಣೆ ಮಾಡುತ್ತಿವೆ.ಆದರೆ ಕೂಲಿ ಕಾರ್ಮಿಕರು ಬಡವರು ಮತ್ತು ನಿರ್ಗತಿಕರು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಇದ್ದು ಅವಶ್ಯಕತೆ ಇರುವ ಕುಟುಂಬಗಳಿಗೆ ಅಕ್ಕಿ. ಬೇಳೆ. ಪಾಮ್ ಆಯಿಲ್. ಶೇಂಗಾ. ಅವಲಕ್ಕಿ. ಸೇರಿದಂತೆ ಒಂದು ತಿಂಗಳಿಗೆ ಆಗುವಷ್ಟು ದಿನಬಳಕೆಯ ವಸ್ತುಗಳನ್ನು ದತ್ತಾ ವಾಸ್ಟರ್ ಮತ್ತು ಕುಟುಂಬ ಸದಸ್ಯರು ಅಥಣಿ ಪಟ್ಟಣದ ಭಾಂಡೇಗಾರ ಒಣಿ. ಗೊಂಧಳಿ ಗಲ್ಲಿ. ಮದ್ದಿನ ಮಡ್ಡಿ. ಮತ್ತು ಪೌರ ಕಾರ್ಮಿಕರು ಹಾಗೂ ಅಗ್ನಿಶಾಮಕ ಇಲಾಖೆ ಹತ್ತಿರದ ಜೋಪಡಿ ನಿವಾಸಿಗಳಿಗೆ ಸೇರಿದಂತೆ ಏಳುನೂರಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿದರು.ಈ ವೇಳೆ ಮಾತನಾಡಿದ ದತ್ತಾ ವಾಸ್ಟರ್ ಯಾವುದೇ ಪ್ರಚಾರದ ಉದ್ದೇಶ ಅಥವಾ ಸ್ವಾರ್ಥದಿಂದ ನಾವು ಪಡಿತರ ವಿತರಣೆ ಮಾಡುತ್ತಿಲ್ಲ ಮನುಷ್ಯ ಜೀವನದಲ್ಲಿ ಹೋಗುವಾಗ ಎನನ್ನೂ ತೆಗೆದುಕೊಂಡು ಹೋಗುವದಿಲ್ಲ ಆದರೆ ಉಳಿದವರು ನಾನು ಕೊಡುವದನ್ನು ನೋಡಿ ಮತ್ತಷ್ಟು ಬಡಜನರಿಗೆ ಸಹಾಯ ಹಸ್ತ ನೀಡಲು ಮುಂದಾಗಬೇಕು ಈಗಾಗಲೇ ಹಲವಾರು ಬಡ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಿದ್ದೇವೆ ಅಷ್ಟೇ ಅಲ್ಲದೆ ಕನ್ನಡಿಗರು ಹೆಚ್ಚಾಗಿರುವ ಮಹಾರಾಷ್ಟ್ರದ ಜತ್ತ ತಾಲ್ಲೂಕಿನಲ್ಲಿಯೂ ಪಡಿತರ ವಿತರಣೆ ಮಾಡುವ ಯೋಚನೆ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಥಣಿ ಪಟ್ಟಣದ ವಾಸ್ಟರ್ ಕುಟುಂಬ ಸದಸ್ಯರಾದ ಜಿನ್ನು ವಾಸ್ಟರ್. ಶಿವಾನಂದ ವಾಸ್ಟರ್. ಶ್ರಾವಣ ವಾಸ್ಟರ್. ಪ್ರಕಾಶ ವಾಸ್ಟರ್. ಗಣೇಶ ವಾಸ್ಟರ್. ಮತ್ತು ಇತರರು ಉಪಸ್ಥಿತರಿದ್ದರು Share