ಬ್ರೇಕಿಂಗ್ ನ್ಯೂಸ್ ಲಾಕ್ ಡೌನ ವೇಳೆಯಲ್ಲಿಯೂ ಕಾರ್ಮಿಕರನ್ನು ದುಡಿಸುತ್ತಿರುವ ಗುತ್ತಿಗೆದಾರ 10/04/202010/04/20201 min read admin ವರದಿ: ಲಖನ ಕಟ್ಟಿಕಾರರಾಯಬಾಗ : ರಾಯಬಾಗ ತಾಲೂಕಿನ ಪಾಲಬಾಂವಿ ಗ್ರಾಮದಲ್ಲಿ ಘಟಪ್ರಭಾ ಎಡದಂಡೆ ಕಾಲುವೆ ಪಕ್ಕದಲ್ಲಿ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ಮುಗಳಖೋಡ ಮಹಾಲಿಂಗಪೂರ ಕೆನಾಲ ರಸ್ತೆಯಿಂದ ಪಾಲಬಾಂವಿ ಶಿವಾನಂದ ಕಾಡಶೆಟ್ಟಿ ತೋಟದವರೆಗಿನ ರಸ್ತೆ ಕಾಮಗಾರಿಯೂ ಗುತ್ತಿಗೆದಾರೊಬ್ಬರು ಸಮೀಪದ ಮೂಡಲಗಿಯಿಂದ ಸುಮಾರು 25 ಕ್ಕೂ ಹೆಚ್ಚು ದಿನಗೂಲಿ ಕೆಲಸಗಾರರನ್ನು ಕರೆತಂದು ಕೆಲಸ ಮಾಡಿಸುತ್ತಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿಯೂ ಕೂಡಾ ಗುಂಪು ಗುಂಪಾಗಿ ಕೆಲಸ ಮಾಡಿಸುತ್ತಿರುವುದು ಅಪರಾದಕ್ಕೆ ಸಾಕ್ಷಿಯಾಗಿದೆ. ಕೂಲಿಕಾರ್ಮಿಕರು ಮಾಸ್ಕ, ಹ್ಯಾಂಡ್‌ಗ್ಲೊಸ್ ಇಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೆಲಸದಲ್ಲಿ ತೊಡಗಿಕೊಂಡಿದ್ದರು. ರಾಜಾದ್ಯಂತ 144 ಸೇಕ್ಸೆನ್ ಜಾರಿಯಿರುವುದರಿಂದ ಇವರ ಮೇಲೆ ಯಾವ ಕ್ರಮ ಕೈಗೊಳ್ಳಬೇಕೆಂಬುವುದು ಸಂಬoದಪಟ್ಟ ಅಧಿಕಾರಿಗಳೆ ತಿರ್ಮಾನಿಸಬೇಕು.ಪತ್ರಕರ್ತರು ವಿಡಿಯೋ ಹಾಗೂ ಪೋಟೋ ತಗೆಯಲು ಯತ್ನಿಸಿದಾಗ ಪತ್ರಕರ್ತರೊಂದಿಗೆ ಗುತ್ತಿಗೆದಾರರ ಸಹಾಯಕನೊಬ್ಬನು ವಾಗ್ವಾದ ನಡೆಸಿದನು ಆತನ ಹೆಸರು ಕೇಳಿದಾಗ ಮರಳಿ ಪ್ರಶ್ನಿಸಿ ಗುತ್ತಿಗೆದಾರರ ಸಹಾಯಕ ತಪ್ಪಿಸಿಕೊಂಡು ಮುಖ ತೋರಿಸದೆ ಪಲಾಯನಗೈದನು.ವಿ಼ಷಯ ಗೊತ್ತಿದ್ದರು ಸ್ಥಳಕ್ಕೆ ಆಗಮಿಸದ ಗುತ್ತಿಗೆದಾರ. ಪೋಲಿಸರು ಹಾಗೂ ಜೆಎಲ್‌ಬಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿರುವುದನ್ನು ಕಂಡಕೂಡಲೆ ಕೂಲಿಕಾರ್ಮಿಕರು ದಿಕ್ಕಾಪಾಲಾಗಿ ಓಡತೋಡಗಿದರು.ಬಾಕ್ಷ ಲೈನ್:ಮೂಡಲಗಿಯ ಮನೆಯಲ್ಲಿ ಕುಳಿತುಕೊಂಡರೆ ಹೊಟ್ಟೆಪಾಡಿಗಾಗಿ ನಾವು ಏನು ಮಾಡಬೇಕು.? ಅದಕ್ಕಾಗಿ ದುಡಿಯಲು ಬಂದಿದ್ದೆವೆ. ಮೂಡಲಗಿಯಲ್ಲಿ ಬಿ.ಪಿ.ಎಲ್. ಕಾರ್ಡ ಹೊಂದಿದ್ದು ಒಂದು ದಿನ ಹಾಲು ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ, ಗೋಧಿ ಪಡೆದರೆ ಹೊಟ್ಟೆ ತುಂಬಿಕೊಳ್ಳಲು ಸಾದ್ಯವಿಲ್ಲ ನಮ್ಮ ನೋವಿಗೆ ಯಾರು ಸ್ಪಂದಿಸಿಲ್ಲ. ಅದಕ್ಕಾಗಿ ನಾವು ದುಡಿಯಲು ಬಂದಿದ್ದೆವೆ ಎಂದು ತಮ್ಮ ಅಳಲು ತೊಡಿಕೊಂಡರು.ಬಸವರಾಜ ಕೆಮ್ಮಾಜಿ ಬಂಡಿವಡ್ಡರ :- ಮೂಡಲಗಿಯ ನಿವಾಸಿ.ನಾವು ನಮ್ಮ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿದ್ದು ಅವರಿಗೆ ವಾರಕ್ಕೆ 2 ಸಾವಿರ ರೂ ಔಷದಿ ಖರ್ಚು ಇದ್ದು ಅದನ್ನು ನಿಭಾಯಿಸಲು ದುಡಿಮೆ ಅನಿವಾರ್ಯವಾಗಿದೆ.ಸದಾಶಿವ ಗಾಡಿವಡ್ಡರ ಮೂಡಲಗಿ Share