ಸಮಾಜಿಕ ಅಂತರವೆ ಕೋರೋನಕ್ಕೆ ಮದ್ದು

ರಾಯಬಾಗ : ಪ್ರತಿಯೊಬ್ಬರು ಲೌಕಡಾನ್ ಸಮಯದಲ್ಲಿ ಮನೆಯಲ್ಲಿ ಇದ್ದು ಒಬ್ಬರಿಂದ ಒಬ್ಬರಿಗೆ ಕನಿಷ್ಠ ಒಂದು ಮೀಟರ ಅಂತರ ಸಮಾಜಿಕ ಅಂತರವನ್ನು ಕಾಯ್ದುಕೊಂಡರೆ ಮಾರಾಣಾಂತಿಕ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಕುಡಚಿ ಶಾಸಕ ಪಿ. ರಾಜೀವ್ ಹೇಳಿದರು. ಅವರು ತಾಲೂಕಿನ ಅಂಗನವಾಡಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆರಿಗೆ ಮಾಸ್ಕ ವಿತರಿಸಿ ಮಾತನಾಡಿ ಪೋಲಿಸರು, ಅಂಗನವಾಡಿ, ಆಶಾಕಾರ್ಯಕರ್ತೆರು ನಿಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದ್ದು ಅವರಿಗೆ ಗ್ರಾಮಸ್ಥರು ಸಹಕರಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಯಲ್ಲಪ್ಪ ಶಿರಗೂರೆ, ಗ್ರಾ.ಪಂ ಉಪಾದ್ಯಕ್ಷ ಮಾರುತಿ ಪಡಚೆ, ಮಾಜಿ.ಜಿ.ಪಂ ಸದಸ್ಯ ಮಹಾದೇವ ಶಿರಗೂರೆ, ಪಿ.ಡಿ.ಒ ಎಸ್.ಟಿ.ತಿಗಡಿ, ಗ್ರಾಮಲೆಕ್ಕಾಧಿಕಾರಿ ರಮೇಶ ರೊಟ್ಟಿ ಮುಂತಾದವರು ಇದ್ದರು
Share
WhatsApp
Follow by Email