ಬ್ರೇಕಿಂಗ್ ನ್ಯೂಸ್ ಅಕ್ರಮ ಮದ್ಯ ಮಾರಾಟ ಆರೋಪ ಹಿನ್ನಲೆ, ಅಬಕಾರಿ ಅಧಿಕಾರಿಗಳಿಂದ ವೈನ್ ಶಾಪ್ ಮೇಲೆ ದಾಳಿ, ಪರಿಶೀಲನೆ 12/04/202012/04/20201 min read admin ಅಥಣಿ: ದೇಶಾದ್ಯಾಂತ ಕರೊನಾ ವೈರಸ್ ಅಟ್ಟಹಾಸ ಹಿನ್ನಲೆ ಕೇಂದ್ರ ಸರಕಾರ 21 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ. ರಾಜ್ಯ ಸರಕಾರ ರಾಜ್ಯದ ಎಲ್ಲ ಮದ್ಯಮಾರಾಟವನ್ನು ನಿಷೇಧ ಮಾಡಿರುವದರಿಂದ ಅಕ್ರಮ ಮದ್ಯ ಮಾರಾಟ ಧಂದೆ ತಲೆ ಎತ್ತಿದೆ. ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿರುವ ಸರೋವರ ವೈನ್ಸ ಶಾಪ್ ನಿಂದ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿರುವ ದೂರು ಬೆಳಗಾವಿ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ತಪುಪಿರುವ ಹಿನ್ನಲೆಯಲ್ಲಿ ಗೋಕಾಕ ಸಬ್ ಡಿವಿಜನ್ ನ ಅಬಕಾರಿ ನಿರೀಕ್ಷ ಶಂಕರಗೌಡ ಪಾಟೀಲ್ ಅವರ ನೇತೃತ್ವದ ತಂಡದಿoದ ದಾಳಿ ನಡೆಸಿ ಕ್ಲೋಜ್ ಆಗಿರುವ ದಿನದ ಮಾರಾಟ ಮತ್ತು ಸದ್ಯ ಇರುವ ಸ್ಟಾಕ್ ಇರುವ ಮಾಹಿತಿ ಪಡೆದ ಅಧಿಕಾರಿಗಳು ಅಕ್ರಮವಾಗಿ ಮಾರಾಟ ಮಾಡಿರುವದನ್ನು ಪರಿಶೀಲನೆ ನಡೆಸಿದರು. ಶನಿವಾರ ಮದ್ಯಾನ್ಹ 8 ಜನರ ಅಬಕಾರಿ ಅಧಿಕಾರಿಗಳ ತಂಡ ದರೂರು ಗ್ರಾಮದಲ್ಲಿರುವ ಸರೋವರ ವೈನ್ ಶಾಪ್ ಗೆ ದೀಡಿರ ದಾಳಿ ನಡೆಸಿರು. ವೈನ್ ಶಾಪ್ ನಲ್ಲಿರುವ ಮದ್ಯವನ್ನು ಪರಿಶೀನೆ ನಡೆಸಿ ಅಕ್ರಮವಾಗಿ ಸಾಗಾಟ ಮಡಿದ್ದಾರಾ ಎನ್ನುವದರ ಕುರಿತು ಪರಿಶೀಲನೆ ನಡೆಸಿದರು. ಎಲ್ಲಿ ಮದ್ಯವನ್ನು ಬಚ್ಚಿಟ್ಟಿದ್ದರು ಎನ್ನುವ ಬಗ್ಗೆ ಮಾಹಿತಿ ನೀಡಲು ಅಧಿಕರಿಗಳು ಹಿಂದೇಟು ಹಾಕಿದರು. ಪ್ರಭಾವಿಗಳ ಪ್ರಭಾವ ಬೀರಿರುವ ಆರೋಪ: ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ ಪ್ರಭಾವಿ ನಾಯಕರುಗಳು ಒತ್ತಡ ಹಾಕಿ ಯಾವುದೆ ಕ್ರಮ ಕೈಗೊಳ್ಳದಂತೆ ಒತ್ತಡ ಹೇರಿದ್ದಾರೆ ಎನುವ ಆರೋಪ ಕೇಳಿ ಬಂದಿದೆ. ಇನ್ನು ಸುದ್ದಿ ಮಾಡಲು ಸ್ಥಳಕ್ಕೆ ಬೇಟಿ ನೀಡಿದ ಸಮಯದಲ್ಲಿ ಅಧಿಕಾರಿಗಳು ಯಾವುದೆ ಪೋಟೊ ಹಾಗೂ ವಿಡಿಯೋ ತೆಗೆಯದಂತೆ ಪತ್ರಕರ್ತರನ್ನು ತಡೆದ ಘಟನೆ ಸಹ ನಡೆಯಿತು. ನಂತರ ಮೇಲಾಧಿಕಾರಿಗಳ ಗಮನಕ್ಕೆ ತಂದ ಮೇಲೆ ಪತ್ರಕರ್ತರಿಗೆ ಅವಕಾಶ ಮಾಡಿಕೊಟ್ಟ ಘಟನೆ ನಡೆಯಿತು. ಲಾಕ್ ಡೌನ್ ಆಗಿ 18 ದಿನಗಳು ಕಳೆದಿದ್ದು, ಮದ್ಯ ಸಿಗದೆ ಜಿಲ್ಲೆಯಾದ್ಯಾಂತ ಮದ್ಯ ಪ್ರಿಯರು ಕಂಗಾಲಾಗಿದ್ದು ಎಲ್ಲಿ ಅಕ್ರಮವಾಗಿ ಮದ್ಯ ಸಿಕ್ಕರು 4 ರಿಂದ 5 ಪಟ್ಟು ಹೆಚ್ಚಿಗೆ ಹಣ ಕೊಟ್ಟು ಮದ್ಯ ಪಡೆಯುತ್ತಿರುವ ಮಾಹಿತಿ ಲಭ್ಯವಾಗಿದೆ. ಅಷ್ಟೆ ಅಲ್ಲದೆ ಪಕ್ಕದ ಮಹಾರಾಷ್ಟ್ರ ರಾಜ್ಯದಿಂದಲೂ ಗಡಿ ತಾಲೂಕಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ಅಥಣಿ ಅಬಕಾರಿ ನಿರೀಕ್ಷರ ವಲಯದಲ್ಲಿ ನಡೆದಿವೆ. ಸದ್ಯ ಅಥಣಿ ತಾಲೂಕಿನ ಕೆಲವು ವೈನ್ ಶಾಪ್, ಬಾರ, ಕ್ಲಬ್ ನಡೆಸುವವರು ಅಕ್ರಮ ಮದ್ಯ ಮಾರಾಟಗಾರರಿಗೆ ಮದ್ಯ ಸರಬರಾಜು ಮಾಡುತ್ತಿರುವ ದೂರುಗಳು ಬಂದಿರುವದರಿoದ ರೂಟೀನ್ ಚೇಕ್ ಮಾಡುತ್ತಿರುವದಾಗಿ ಗೋಕಾಕ ಅಬಕಾರಿ ನಿರೀಕ್ಷ ಶಂಕರಗೌಡ ಪಾಟೀಲ್ ಅವರು ತಿಳಿಸಿದರು. Share