ಬೆಳಗಾವಿ – ಕೊರೊನಾ ವೈರಸ್ ನಿಂದ ಕೂಲಿ ಕಾರ್ಮಿಕರಿಗೆ, ಬಡ ಜನರಿಗೆ ತಮ್ಮ ಉಪಜೀವನ ನಡೆಸಲು ತೊಂದರೆಯಾಗಿ ಪರಿತಪಿಸುತಿದ್ದು, ಇವತ್ತು ತುಮ್ಮರಗುದ್ದಿ ಗ್ರಾಮದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ತರಕಾರಿ ಹಾಗೂ ವಿವಿಧ ದಿನಸಿ ಸಾಮಗ್ರಿ ವಿತರಿಸಲಾಯಿತು.
ಜನರಲ್ಲಿ ಕೊರೊನಾ ಸೋಂಕಿನ ಬಗ್ಗೆ ಜನಜಾಗೃತಿಯನ್ನು ಮೂಡಿಸಿದ ಫೌಂಡೇಶನ್ ಕರಾಯಕರ್ತರು, ಮಾಸ್ಕ್, ಸ್ಯಾನಿಟೈಸರ್, ಕಿರಾಣಿ (ದಿನಸಿ) ಸಾಮಾಗ್ರಿಗಳು ಹಾಗೂ ವಿವಿಧ ಬಗೆಯ ತರಕಾರಿಗಳನ್ನು ವಿತರಿಸಿದು.
ಕ್ಷೇತ್ರದ ಬಡಾಲ ಅಂಕಲಗಿ, ಹಲಗಿಮರ್ಡಿ, ಕೊಲಾರಕೊಪ್ಪ, ಕೆ ಕೆ ಕೊಪ್ಪ ಹಾಗೂ ಹುಲಿಕವಿ ಈ ಎಲ್ಲ ಗ್ರಾಮಗಳಲ್ಲಿ ಸಿ ಸಿ ಪಾಟೀಲ ಹಾಗೂ ಪಕ್ಷದ ಕಾರ್ಯಕರ್ತೆರೆಲ್ಲ ಸೇರಿ ಕೊರೊನಾ ವೈರಸ್ (COVID19) ಬಗ್ಗೆ ಜನಜಾಗೃತಿಯ ಅಭಿಯಾನವನ್ನು ಕೈಗೊಂಡರು. ಅಲ್ಲದೆ ಮುಂಜಾಗ್ರತೆಯ ಕ್ರಮಗಳನ್ನು ಜನರಿಗೆ ತಿಳಿಸಿ ಹೇಳುವುದರ ಮೂಲಕ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಟಲ್ ಗಳನ್ನು ವಿತರಿಸಿದರು.