ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆಗೆ ಸಂಸದರಿಗೆ ಮನವಿ

ಮುಗಳಖೋಡ: ಕಳೆಸ ೧೫ ದಿನಗಳ ನಂತರ ಮುಗಳಖೋಡಕ್ಕೆ ಭೆೆÃಟಿ ನೀಡಿದ ಶಾಸಕ, ಸಂಸದರಿಗೆ ಸ್ಥಳಿಯ ಪುರಸಭೆ ವತಿಯಿಂದ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಮಾಸ್ಕ ವ್ಯವಸ್ಥೆ ಮಾಡುವಂತೆ ಸ್ಥಳಿಯ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಮನವಿ ಮಾಡಿದ ಘಟನೆ ಮಂಗಳವಾರ ನಡೆಯಿತು. ಹೌದು ಇಂತ್ತಹ ಜೀವ ಸಂರಕ್ಷಣಾ ವಸ್ತುಗಳಾದ ಮಾಸ್ಕ ಸ್ಯಾನಿಟೈಸರ್‌ಗಳನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜೀವದ ಸಂರಕ್ಷಣೆಗಾಗಿ ಪುರಸಭೆಯವರೆ ನೀಡಬೇಕು.
ಇದಕ್ಕೂ ಮೊದಲು ಸಂಸದ ಅಣ್ಣಾಸಾಹೇಬ ಜೋಲ್ಲೆ ಮಾತನಾಡಿ ಪ್ರತಿಯೊಬ್ಬರು ಸುರಕ್ಷೆತೆಯ ಅಂತರದೊAದಿಗೆ ಮನೆಯಲ್ಲಿ ವಾಸಿಸುವಂತ್ತೆ ಜನರಲ್ಲಿ ಮನವಿ ಮಾಡಿದ ಅವರು ರೈತರು ಬೆಳೆದ ಬೆಳೆಗಳನ್ನು ನಾಶಮಾಡದೆ ಸರ್ಕಾರದ ವತಿಯಿಂದ ಮಾರುಕಟ್ಟಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರ ಸಕಾರದ ಯೋಜನೆಗಳಾದ ಉಜ್ವಲ ಯೊಜನೆ, ಉಚಿತ ಗ್ಯಾಸ್, ಜನದನ್ ಯೋಜನೆ ಖಾತೆಗೆ ಹಣ ಜಮಾ ಮಾಡಿದ್ದು ತಾವೆಲ್ಲರು ಅದರ ಸದುಪಯೋಗ ಮಾಡಿಕೊಂಡು ಜನರು ಮನೆಯಲ್ಲೆ ಇರಲು ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿ ಮಾಸ್ಕ್ಗಳನ್ನು ವಿತರಿಸಿದರು.
ಕರೊನಾ ವೈರಸ್ ಹೋಗಲಾಡಿಸಲು ಜನರು ಮುಂಜಾಗ್ರತ ಕ್ರಮಗಳನ್ನು ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಪಿ. ರಾಜೀವ್ ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಗ್ರಾಮ ಲೆಕ್ಕಾಧಿಕಾರಿ ಎಸ್.ಎಸ್.ಹತ್ತರಕಿ, ವೈದ್ಯಾಧಿಕಾರಿ ಡಾ. ಎಸ್.ಎಮ್. ಪಾಟೀಲ, ಪಿಎಸ್.ಐ ಯಮಣಪ್ಪ ಮಾಂಗ್, ಪಿ.ಕೆ.ಡೋಣಿ, ಪುರಸಭೆ ಸದಸ್ಯ ರಮೇಶ ಖೇತಗೌಡರ, ಶಿವಾನಂದ ಗೋಕಾಕ, ಲತಾ ಹುದ್ದಾರ, ಅಣ್ಣಪೂರ್ಣಾ ಯರಡತ್ತಿ, ಮಂಗಲ್ ಪಣದಿ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಪುರಸಭೆ ಸಿಬ್ಬಂದಿಯವರು ಇದ್ದರು.
Share
WhatsApp
Follow by Email