ಬ್ರೇಕಿಂಗ್ ನ್ಯೂಸ್ ಮಹಾರಾಷ್ಟ್ರದಲ್ಲಿ ಇಂದು 117 ಕೊರೋನಾ ಪ್ರಕರಣ: 3 ಸಾವಿರ ಗಡಿಯತ್ತ ಸೋಂಕಿತರ ಸಂಖ್ಯೆ 15/04/202015/04/2020 admin ಮುಂಬೈ: ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನ 117 ಹೊಸ ಪ್ರಕರಣಗಳು ದಾಖಲಾಗಿದೆ.ದೇಶದಲ್ಲಿ ಕೊರೋನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ನನ್ನು ಮೇ.3ರರವರೆಗೆ ವಿಸ್ತರಿಸಿದೆ. ಈ ನಡುವೆ ಮಹರಾಷ್ಟ್ರದಲ್ಲಿ ಒಂದೇ ದಿನ 117 ಪ್ರಕರಣಗಳು ದಾಖಲಾಗಿದೆ. ಮುಂಬೈನಲ್ಲಿ 66 ಪ್ರಕರಣಗಳು, ಪುಣೆಯಲ್ಲಿ 44 ಪ್ರಕರಣಗಳು ವರದಿಯಾಗಿದೆ. ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2801ಕ್ಕೆ ಏರಿಕೆಯಾಗಿದೆ. Share