ರಾಜ್ಯದಲ್ಲಿ 17 ಹೊಸ ಪ್ರಕರಣಗಳು ಪತ್ತೆ: 277ಕ್ಕೇರಿದ ಸೋಂಕಿತರ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪವಾಗಿ ಹರಡುತ್ತಿದ್ದು, ಇಂದು ಒಂದೇ ದಿನ ರಾಜ್ಯದಲ್ಲಿ 17 ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೂ ಒಟ್ಟು 277 ಕೊರೋನಾ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇಂದು ಪತ್ತೆಯಾದ 17 ಪ್ರಕರಣಗಳಲ್ಲಿ 15 ಪುರುಷರು ಮತ್ತು 2 ಮಹಿಳೆಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
10 ಪ್ರಕರಣಗಳು ಮೈಸೂರಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ 9 ಮಂದಿ ನಂಜನಗೂಡಿನವರೆಂದು ತಿಳಿದಿದೆ.
ಉಳಿದಂತೆ ಬೆಂಗಳೂರು 2, ಬಾಗಲಕೋಟೆ 2, ವಿಜಯಪುರದಲ್ಲಿ 2 ಪ್ರಕರಣ ಪತ್ತೆಯಾಗಿದ್ದು, ಕಲಬುರಗಿಯಲ್ಲಿ 1 ಕೊರೋನಾ ಪ್ರಕರಣ ವರದಿಯಾಗಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆಯಾಗಿದ್ದು, 75 ಮಂದಿ ಗುಣಮುಖರಗಿದ್ದಾರೆ.
Share
WhatsApp
Follow by Email