ಬ್ರೇಕಿಂಗ್ ನ್ಯೂಸ್ ಪೊಲಿಸರಿಗೆ ಮುಳ್ಳಾಗಿ ಕಾಡುತ್ತಿರುವ ಬ್ಯಾಂಕ್ ಗಳು 15/04/202015/04/2020 admin ಕನ್ನಡ ಟುಡೆ ವಿಶೇಷ ವರದಿಯಲ್ಲಪ್ಪ ಮಬನೂರಚಿಕ್ಕೋಡಿ: ಮಾಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್ನ್ನು ತಡೆಗಟ್ಟುವ ಸಲುವಾಗಿ 2 ನೇ ಸುತ್ತಿನ ಇಡಿ ದೇಶದಲ್ಲಿ ಲಾಕ್ ಡೌನ್ ಮಾಡಲಾಗಿದೆ ಆದರೆ ಚಿಕ್ಕೋಡಿ ಪಟ್ಟಣದಲ್ಲಿ ಬುಧವಾರ ಬೆಳಗ್ಗೆಯಿಂದ ದ್ವಿಚಕ್ರವಾಹನ ಸಂಚಾರ ಹೆಚ್ಚಾಗಿದ್ದರಿಂದ ಚಿಕ್ಕೋಡಿ ಯಲ್ಲಿ ಲಾಕ್‍ಡೌನ್ ಇದೆಯೋ ಇಲ್ಲವೋ ಎಂಬ ಸಂಶಯ ನಗರದ ನಿವಾಸಿಗಳಿಗೆ ಸಂಶಯ ಕಾಡುತ್ತಿದೆ.ಲಾಕ್ ಡೌನ್ ಜಾರಿಯಾದಗಿನಿದ ಇವತಿನವರಿಗೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದು ಎರಡೂ ದಿನಗಳಿಂದ ಪಟ್ಟಣದಲ್ಲಿ ಲಾಕ್ ಡೌನ್ ಕಿಂತ ಪೂರ್ವದಲ್ಲಿ ಜನರ ಯಾವ ರೀತಿ ಸಂಚಾರ ಇತ್ತು ಅದೇ ತರಹ ಜನ ಸಂಚಾರ ಕಂಡು ಬಂದಿರುವುದರಿಂದ ಲಾಕ್‍ಡೌನ್‍ದಲ್ಲಿ ಸಡಿಲಿಕೆ ಉಂಟಾಗಿದಂತೆ ಕಾಣಿಸುತ್ತಿದೆ ಎಂದು ಪಟ್ಟಣದ ಕೆಲವು ನಗರದಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಕೊರೊನಾ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೇರಿರುವ ಲಾಕ್‍ಡೌನ್‍ನ್ನು ಇನ್ನಷ್ಟು ದಿನ ಕಟ್ಟುನಿಟ್ಟಾಗಿ ಪಾಲಿಸಲು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ನಗರಕ್ಕೆ ಬಂದು ಸೇರುವ ಎಲ್ಲಾ ಮುಖ್ಯ ರಸ್ತೆಗಳಿಗೆ ಚೇಕ್ ಪೊಷ್ಟ ನಿರ್ಮಿಸಿ ಅಲ್ಲಿ ಎಲ್ಲಾ ವಾಹನಗಳನ್ನು ತಡೆದು ತಪಾಸನೆ ಮಾಡಿದಾಗ ಜನರು ಹೇಳುವುದು ಒಂದೆ ಮಾತು ಅದು ಬ್ಯಾಂಕಿಗೆ ಹೊರಟಿದ್ದೆನೆ ಎಂದು ಪಾಸ ಬುಕ್ ತೊರಿಸುತ್ತಾರೆ. ಅಷ್ಟೆ ಅಲ್ಲದೆ ವಾಮ ಮಾರ್ಗದ ಮೂಲಕ ಸಾಕಷ್ಷು ಜನರು ಬ್ಯಾಂಕಿಗೆಂದು ಬರುತ್ತಿದ್ದಾರೆ ಇದಕ್ಕೆ ಪೋಲಿಸ್ ಅಧಿಕಾರಿಗಳು ಹೆಚ್ಚುವರಿಯಾಗಿ ೧೫ ಜನ ಹೊಮ್ ಗಾಡಗಳನ್ನು ತರಸಿಕೊಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪಿಎಸ್ ಐ ರಾಕೇಶ ಬಗಲಿ ತಿಳಿಸಿದರು . Share