ಕೆಪಿಸಿಸಿಗೆ ಪರಿಹಾರ ನಿಧಿಗೆ ಡಾ. ನಾಡಗೌಡ ಪಾಟೀಲರಿಂದ ದೇಣಿಗೆ



ರಬಕವಿ-ಬನಹಟ್ಟಿ: ದೇಶದಲ್ಲಿ ವ್ಯಾಪಿಸಿರುವ ಕೋರೊನಾ ವೈರಸ್‌ನಿಂದ ಸಂಕಷ್ಟ ಅನುಭವಿಸುತ್ತಿರುವವರಿಗೆ ಕರ್ನಾಟಕದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು ನೆರವು ನೀಡಲು, ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರರ ನೇತೃತ್ವದಲ್ಲಿ ವಿಪತ್ತು ಪರಿಹಾರ ನಿಧಿಯನ್ನು ಸಂಗ್ರಹಿಸುತ್ತಿದೆ. ಕಾಂಗ್ರೆಸ್ ಪಕ್ಷವು ವಿಪತ್ತು ಸಂಭವಿಸಿದಾಗ ಸಂಕಷ್ಟದಲ್ಲಿರುವರಿಗೆ ಸ್ಪಂದಿಸುವ ಪ್ರಥಮ ಪಕ್ಷವಾಗಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಹಾಗೂ ರಬಕವಿಯ ನೇತ್ರತಜ್ಞ ಡಾ. ಪದ್ಮಜೀತ ಅ. ನಾಡಗೌಡಪಾಟೀಲರು ಕಾಂಗ್ರೆಸ್ ಪಕ್ಷದ ವಿಪತ್ತು ಪರಿಹಾರ ನಿಧಿಗೆ ಎರಡು ಲಕ್ಷ ರೂ.ಗಳ ಚೆಕ್‌ನ್ನು ಗೋಕಾಕದಲ್ಲಿ ಸ್ವೀಕರಿಸಿ ಸತೀಶ ಜಾರಕಿಹೊಳಿ ಹೇಳಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಪತ್ತಿನಿಂದ ತೊಂದರೆಗೊಳಗಾದವರ ಸೇವೆ ಸದಾ ಮುಂಚೂಣಿಯಲ್ಲಿರುತ್ತಾರೆ. ಕೋರೊನಾ ಹಾವಳಿಯಿಂದ ತತ್ತರಿಸಿದ ತೇರದಾಳ ಮತಕ್ಷೇತ್ರದ ಜನರಿಗೆ ಕೈಲಾದ ಅಗತ್ಯ ಸೇವೆ ಹಾಗೂ ಸಹಾಯವನ್ನು ಪಕ್ಷದ ಪರವಾಗಿ ಮಾಡಲಾಗುತ್ತಿದೆ ಎಂದು ಡಾ. ಪದ್ಮಜೀತ ಅ. ನಾಡಗೌಡಪಾಟೀಲ ತಿಳಿಸಿದರು.
ಮಾಜಿ ನಗರಸÀಭಾಧ್ಯಕ್ಷ ಭೀಮಶಿ ಪಾಟೀಲ, ರಾಜಶೇಖರ ಸೋರಗಾಂವಿ, ಸಂಜಯ ಅಮ್ಮಣಗಿಮಠ, ಸಂಜೀವ ಜೋತಾವರ, ಚಿದಾನಂದ ಮಟ್ಟಿಕಲ್ಲಿ, ಗಂಗಪ್ಪಾ ಮಂಟೂರ, ಮಹಮ್ಮದ ಝಾರೆ, ನಿಲೇಶ ದೇಸಾಯಿ, ರಾಜುಗೌಡ ಪಾಟೀಲ್, ಪ್ರವೀಣ ನಾಡಗೌಡ ಪಾಟೀಲ್, ಚಿದಾನಂದ ಪಟ್ಟಣಶೆಟ್ಟಿ, ಸಾಗರ ನಾರವ್ವಗೋಳ, ನಬೀಸಾಬ ಮುಲ್ಲಾ, ಚೇತನ ಕಲಾಲ, ಇಮಾಮ ಹಂಡಗಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು
Share
WhatsApp
Follow by Email