ಅರಟಾಳ : ಹೊಸಬರು ಗ್ರಾಮದ ಒಳಗೆ ಬರದಂತೆ ರಸ್ತೆ ಬಂದ್.. !


ಅರಟಾಳ ; ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೊನಾ ವೈರಸ್ ಹೆಚ್ಚುತ್ತಿರುವ ಕಾರಣ, ದೂರದ ಊರುಗಳಿಂದ ವಾಹನ ಸವಾರರು ಈ ಗ್ರಾಮದ ಮೂಲಕ ಸಾಗುತ್ತಿರುವುದರಿಂದ ಭಯಪಟ್ಟು ಗ್ರಾಮಸ್ಥರು, ಗ್ರಾಮಕ್ಕೆ ಹೊಸಬರು ಬರದಂತೆ ರಸ್ತೆ ಬಂದ ಮಾಡಿದರು.
ತಾಲೂಕಿನ ಅರಟಾಳ ಗ್ರಾಮಕ್ಕೆ ಬರುವ ಹಾಲಳ್ಳಿ ರಸ್ತೆ, ಬಾಡಗಿ ರಸ್ತೆಗೆ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ ಸಹಯೋಗದಲ್ಲಿ ಗುರುವಾರ ರಸ್ತೆಗೆ ಗರಸು ಹಾಕಿ, ಮುಳ್ಳು ಕಂಟಿ, ಕಲ್ಲು ಹಾಕಿ, ಇಡಿ ಗ್ರಾಮಕ್ಕೆ ಹೊರಗಡೆಯಿಂದ ಜನರು ಪ್ರವೇಶಿಸದಂತೆ ರಸ್ತೆ ಬಂದ ಮಾಡಿದ್ದಾರೆ.
ಮೇ 3ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಗ್ರಾಮದ ಒಳಗೆ ಬೇರೆ ಊರಿನವರು ಯಾರು ಗ್ರಾಮ ಪ್ರವೇಶಸದಂತೆ ರಸ್ತೆ ಬಂದ ಮಾಡಿದ್ದಾರೆ. ಗ್ರಾಮ ಪಂಚಾಯತ ರಚನೆ ಮಾಡಿರುವ ಕಾರ್ಯಪಡೆಯ ಎಲ್ಲ ಸದಸ್ಯರು ಸೇರಿ, ಗ್ರಾಮಕ್ಕೆ ಹೊರಗಿನವರು ಬಂದಾಗ ಖುದ್ದು ಅವರನ್ನು ಆರೋಗ್ಯ ಇಲಾಖೆಯವರ ಜೋತೆಗೆ ಭೇಟ್ಟಿಯಾಗಿ ಪರಿಶ್ಲಿಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಕಾರ್ಯಪಡೆಯ ಸದಸ್ಯರು ಪ್ರತಿ ದಿನ ಸಾರ್ವಜನಿಕರಿಗೆ ಕರೋನಾ ವೈರಸ್ ಕುರಿತು ಮಾಹಿತಿ ನೀಡುತ್ತಿದ್ದಾರೆ. ಜವಾಬ್ದಾರಿಯುತ್ತ ಕೆಲಸವನ್ನು ಕಾರ್ಯಪಡೆಯ ಸದಸ್ಯರು ಮಾಡುತ್ತಿದ್ದಾರೆ
Share
WhatsApp
Follow by Email