ಬ್ರೇಕಿಂಗ್ ನ್ಯೂಸ್ ವೈದ್ಯಕೀಯ ರಂಗದಲ್ಲಿ ಅಲ್ಪಸಂಖ್ಯಾತ ಬಾಲಕಿಯ ಸಾಧನೆ, ಗಣ್ಯರ ಮೆಚ್ಚುಗೆ 16/04/202016/04/2020 admin ಮಹಾಲಿಂಗಪುರ : ಸ್ಥಳೀಯ ಇಸ್ಮತ್ ಎಚ್. ಪಟೇಲ್ ಇವರ ಪುತ್ರಿ ಡಾಕ್ಟರ್ ಅಮರೀನ್ ಪ್ರಸಕ್ತ ಸಾಲಿನ ವೈದ್ಯಕೀಯ (ಬಿಎಚ್ಎಂಎಸ್) ಶಿಕ್ಷಣದಲ್ಲಿ ದ್ವಿತೀಯ ಸ್ಥಾನ ಪಡೆದು ಉತ್ತೀರ್ಣರಾಗಿ ನಗರಕ್ಕೆ ಕೀರ್ತಿ ತಂದಿದ್ದಾರೆ. .ಡಾ. ಅಮರೀನ್ ಅವರು ಎಸ್.ಬಿ. ಶಿರಕೋಳ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು, ಸಂಕೇಶ್ವರದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಬಾಲ್ಯದಲ್ಲಿಯೇ ಎಲ್ ಕೆ ಜಿ ವಿದ್ಯಾರ್ಥಿಯಾಗಿದ್ದಾಗಲೇ ವೈದ್ಯಳಾಗುವ ಕನಸು ಕಂಡು ಸ್ಥಳೀಯ ಪ್ರಗತಿ ಶಾಲಾ ವಾರ್ಷಿಕೋತ್ಸವದಲ್ಲಿ ವೈದ್ಯರ ಛದ್ಮವೇಷ ಹಾಕಿ ಭಾಗವಹಿಸಿದ್ದನ್ನು ಸ್ಮರಿಸುತ್ತಾಳೆ. ಈಗ ಆ ಕನಸು ನನಸಾಗಿದ್ದಕ್ಕೆ ಪಟೇಲ್ ದಂಪತಿಗಳು ಸಂತೋಷ ಪಡಿಸಿದ್ದಾರೆ.ಡಾ.ಅಮರೀನ್ ಒಂದನೇ ತರಗತಿಯಿಂದಲೇ ಪೂರ್ಣ ಶಿಕ್ಷಣ ಉರ್ದು ಮಾಧ್ಯಮದಲ್ಲಿ ಓದಿ ಇಂಥ ಅಪೂರ್ವ ಸಾಧನೆ ಮಾಡಿದ ಪ್ರಯುಕ್ತ ನಗರದ ಮಾಜಿ ಪುರಸಭಾ ಅಧ್ಯಕ್ಷ ಬಸನಗೌಡ ಪಾಟೀಲ್ , ಡಾ. ಯು. ಎಸ್. ವನಹಳ್ಳಿ , ಪುರಸಭಾ ಸದಸ್ಯ ಸದಸ್ಯರಾದ ಶೇಖರ್ ಅಂಗಡಿ, ಯಲ್ಲನಗೌಡ ಪಾಟೀಲ, ಜಾವೇದ್ ಭಾಗವಾನ, ಸಜನಸಾಬ ಪೆಂಡಾರಿ, ಪತ್ರಕರ್ತರಾದ ಎಂ. ಐ. ಡಾಂಗೆ, ಮೀರಾ ತಟಗಾರ, ಲಕ್ಷ್ಮಣ ಕಿಶೋರಿ, ನಾರನಗೌಡ ಉತ್ತಂಗಿ ಇತರರು ಅಭಿನಂದಿಸಿದ್ದಾರೆ Share