ಬ್ರೇಕಿಂಗ್ ನ್ಯೂಸ್ 210 ಕುಟುಂಬಗಳಿಗೆ ದಿನಸಿ ಸಾಮಗ್ರಿ ನೀಡಿ ಹೆಗ್ಗಳಿಕೆಗೆ ಪಾತ್ರರಾದ ಮರೇಪ್ಪ ಮರೇಪ್ಪಗೋಳ 16/04/202016/04/2020 admin 210 ಕುಟುಂಬಗಳಿಗೆ ಕಿರಾಣಿ/ದಿನಸಿ ಸಾಮಾನುಗಳನ್ನು ವಿತರಿಸಲಾಯಿತು.ಕೆ ಎಮ್ ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿ ಮರೇಪ್ಪ ಮರೇಪ್ಪಗೋಳ ಅವರಿಂದ ಬಡಜನರಿಗೆ, ಅಲೆಮಾರಿ ಜನಾಂಗಕ್ಕೆ ಮತ್ತು ಹೊರ ರಾಜ್ಯ ದಿಂದ ಬಂದು ಉಳಿದ ಜನರಿಗೆ ಸ್ವಂತ ಹಣದಿಂದ 210 ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ನೀಡಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ವಾರ್ಡ 1 ದೇಶಪಾಂಡೆ ಪ್ಲಾಟ್ , 2 ಗಂಗಾ ನಗರ, 4 ಅಂಬೇಡ್ಕರ್ ನಗರ , 5 ಲಕ್ಷ್ಮಿ ನಗರ, 8 ಬೀರಪ್ಪನ ಗುಡಿ , 9 ಶಿವಾಪೂರ ರೋಡ್ ,11 ಹನೋಕ ನಗರ,12 ರಾಜೀವ ಗಾಂಧಿ ನಗರ,13 ವೆಂಕಟೇಶ ನಗರ , ವಾರ್ಡಗಳಲ್ಲಿ ಕಿರಾಣಿ/ದಿನಸಿ ಸಾಮಾನುಗಳನ್ನು ವಿತರಿಸಲಾಯಿತು.ವಿತರಣೆ ಮಾಡುವ ಸಂಧರ್ಭದಲ್ಲಿ ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಆಪ್ತಸಹಾಯಕಾರಾದ ನಾಗಪ್ಪ ಶೇಕರಗೋಳ, ದಾಸಪ್ಪ ನಾಯ್ಕ , ಮತ್ತು ಮೂಡಲಗಿ ಸಿ ಪಿ ಐ ವೆಂಕಟೇಶ ಮುರನಾಳ, ಪಿ ಎಸ್ ಐ ಮಲೀಕಾರ್ಜುನ್ ಸಿಂಧೂರ, ದಿನಸಿ ವಸ್ತುಗಳನ್ನು ವಿತರಣೆ ಮಾಡಿದರು. ಮರೇಪ್ಪ ಮರೇಪ್ಪಗೋಳ ಮಾತನಾಡಿಮಹಾಮಾರಿ ಕೊರೋನಾ ವೈರಸ್ ದೇಶದ ತುಂಬಾ ಮರಣ ಮೃದಂಗ ಭರಿಸುತ್ತಿರುವ ಈ ಕೊರೋನಾ ದಿನ ದಿನಕ್ಕೂ ಹೆಚ್ಚು ಹರಡುತ್ತಿದ್ದು, ಭಯಾನಕ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದ ಪ್ರಧಾನಮಂತ್ರಿಗಳ ಆದೇಶದ ಮೇರೆಗೆ ದೇಶವೇ ಲಾಕ್‌ಡೌನ್ ಆಗಿದೆ ಜನರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಕಾರ ನೀಡಬೇಕು ಮತ್ತು ಮೆನೆ ಬಿಟ್ಟು ಹೊರಗೆ ಬರದಿದ್ದರೆ ಅವಾಗಲೇ ಕೊರೋನಾ ವೈರಸ್ ತಡೆಗಟ್ಟಲು ಸಾಧ್ಯ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.ದಿನಂಪ್ರತಿ ದುಡಿಮೆಯನ್ನೇ ಅವಲಂಬಿಸಿದ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತಿದ್ದನ್ನು ಕಂಡ ಮರೆಪ್ಪ ಮರೇಪ್ಪಗೋಳ ಅವರು ತಮ್ಮ ಸ್ವಂತ ಖರ್ಚಿನಲ್ಲಿಯೇ 210 ಕುಟುಂಬಗಳಿಗೆ ದಿನಸಿ ಸಾಮಾನುಗಳನ್ನು ನೀಡಿ ಕುಟುಂಬಗಳಲ್ಲಿ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.ಈ ರೀತಿ ಬಡಕುಟುಂಬಗಳಿಗೆ ರೇಶನ್ ವಿತರಿಸಿ ಜಾಗೃತಿ ಮೂಡಿಸಿದ ಮರೇಪ್ಪ ಮರೇಪ್ಪಗೋಳ ಮೂಡಲಗಿನಲ್ಲಿ ಪಬ್ಲಿಕ್ ಹೀರೋ ಆಗಿ ಮಿಂಚಿದ್ದಾರೆ.ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅನೇಕರು ಉಪಸ್ಥಿತರಿದ್ದರು Share