ಬ್ರೇಕಿಂಗ್ ನ್ಯೂಸ್ ಹಾಲು ವಿತರಣೆಯಲ್ಲಿ ತಾರತಮ್ಯ ಅನ್ಯಾಯ ಸರಿಪಡಿಸಿ : ರಾಜು ಜನ್ಮಟ್ಟಿ 19/04/202019/04/20201 min read admin ಬೈಲಹೊಂಗಲ : ಪುರಸಭೆಯ ವ್ಯಾಪ್ತಿಯಲ್ಲಿ ಸರಕಾರದಿಂದ ಹಾಲು ವಿತರಿಸುವಲ್ಲಿ ಅನ್ಯಾಯ ಮಾಡಲಾಗುತ್ತಿದ್ದು, ತಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜು ಜನ್ಮಟ್ಟಿ ಒತ್ತಾಯಿಸಿದ್ದಾರೆ.ಶನಿವಾರ ಉಪವಿಭಾಗಾಧಿಕಾರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು ಸ್ಲಂಗಳಿಗೆ ಹಾಲು ವಿತರಿಸುತ್ತಿರುವ ಬಗ್ಗೆ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಪ್ರತಿ ವಾರ್ಡ್ನಲ್ಲಿ ಅತಿ ಕಡು ಬಡವರು ಇದ್ದು, ಸ್ಲಂಗಳಿಗಿAತ ಅವರ ಪರಿಸ್ಥಿತಿ ಭಿನ್ನವಾಗಿಲ್ಲ. ಈ ಬಗ್ಗೆ ಕೇಳಿದರೆ ಸರಕಾರದ ನಿರ್ದೇಶನದಂತೆ ಕ್ರಮಕೈಕೊಳ್ಳಲಾಗುತ್ತಿದೆ ಎಂದು ತಿಳಿಸುತ್ತಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಶಿವಪ್ಪ ಅಂಬಿಗೇರ ಅವರಿಗೆ ನಿರ್ದೇಶನ ನೀಡಬೇಕೆಂದು ವಿನಂತಿಸಿದ್ದಾರೆ. ಪಟ್ಟಣದ 27 ವಾರ್ಡಗಳಲ್ಲಿ ಬಡ ಕುಟುಂಬಗಳಿದ್ದು ಅಂಥವರನ್ನು ಗುರಿತಿಸಿ ಹಾಲು ಹಂಚಿಕೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಫಾಗಿಂಗ್ ಮಾಡಿಲ್ಲ : ಪುರಸಭೆಯಿಂದ ಎಲ್ಲ ವಾರ್ಡ್ಗಳಲ್ಲಿ ಫಾಗಿಂಗ್ ಮಾಡಬೇಕೆಂದು ಆದೇಶವಿದ್ದರೂ ಈವರೆಗೂ ಕೆಲವೇ ವಾರ್ಡ್ಗಳಲ್ಲಿ ಫಾಗಿಂಗ್ ನಡೆದಿದ್ದು, ಸರಿಯಾಗಿ ಕೆಲಸ ಆಗುತ್ತಿಲ್ಲ. ಪಕ್ಕದ ಹಿರೇಬಾಗೇವಾಡಿಯಲ್ಲಿ ಕೋಡಿಡ್-19ರ ಹಾವಳಿ ತೀವ್ರವಾಗಿದ್ದು, ಅದು ಪಟ್ಟಣದ ಮೇಲೂ ಪರಿಣಾಮ ಬೀರುವ ಸಾದ್ಯತೆ ಇದ್ದು ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ Share