ಬ್ರೇಕಿಂಗ್ ನ್ಯೂಸ್ ಅಥಣಿ ಜನರ ರಕ್ಷಣೆಗೆ ಧಾವಿಸಿದ ಗಜಾನನ ಮಂಗಸೂಳಿ 22/04/202022/04/20201 min read admin ಅಥಣಿ:ದೇಶಾದ್ಯಂತ ಲಾಕ್ ಡೌನ ಮುಂದುವರೆದಿದ್ದು ಇಪ್ಪತ್ತೇಳನೆಯ ದಿನವಾದ ಇಂದು ಅಥಣಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕಾಂಗ್ರೆಸ್ ಟಾಸ್ಕ್ ಫೋರ್ಸ್ ವತಿಯಿಂದ ನೂರಾರು ಕುಟುಂಬಗಳಿಗೆ ಉಚಿತವಾಗಿ ತರಕಾರಿ ವಿತರಣೆ ಮಾಡಲಾಯಿತು.ಹತ್ತು ಟನ್ ಗಳಷ್ಟು ಈರುಳ್ಳಿ, ಟೊಮೆಟೊ, ಕೊತ್ತಂಬರಿ, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿ ಕಿಟ್ ಗಳನ್ನು ಬಡವರಿಗೆ ಉಚಿತವಾಗಿ ಹಂಚಲಾಯಿತು.ಈ ವೇಳೆ ಮಾತನಾಡಿದ ಚಿಕ್ಕೋಡಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾವ್ ಚಿಂಗಳೆ ಮಾತನಾಡಿ ರಾಜ್ಯಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಜನರು ಮತ್ತು ಬಡವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ಎಲ್ಲ ಕಡೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ತಮ್ಮ ಕೈಲಾದಷ್ಟು ಜನಪರ ಕೆಲಸಕ್ಕೆ ಮುಂದಾಗಿದ್ದು ಇಂದು ಅಥಣಿ ಪಟ್ಟಣದಲ್ಲಿ ತರಕಾರಿ ವಿತರಣೆ ಮಾಡಿದ್ದೇವೆ ಎಂದರುಇದೆ ವೇಳೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿ ಅವರುಸಂಕಷ್ಟದ ಕಾಲದಲ್ಲಿ ಜನರೊಂದಿಗೆ ನಾವು ಇದ್ದೇವೆ ಎಂದು ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಮನೆ ಬಾಗಿಲಿಗೆ ಉಚಿತವಾಗಿ ತರಕಾರಿ ಪೂರೈಸುವ ಮೂಲಕ ಸಹಾಯ ಹಸ್ತ ಚಾಚಿದ್ದೇವೆ ಎಂದರು.ಈ ವೇಳೆ ಕಾಂಗ್ರೆಸ್ ಮುಖಂಡರಾದ ಅನೀಲ ಸುಣದೋಳಿ,ಬಸವರಾಜ ಬುಟಾಳಿ,ಸತ್ಯಪ್ಪ ಬಾಗೆನ್ನವರ, ಶ್ರೀಕಾಂತ ಪೂಜೇರಿ,ರಾವಸಾಬ್ ಐಹೊಳೆ, ಸಲಾಮ್ ಕಲ್ಲಿ,ಸುನೀಲ ಸಂಕ,ರಮೇಶ್ ಸಿಂದಗಿ,ಮAಜು ಹೋಳಿಕಟ್ಟಿ, ಸುನಿತಾ ಐಹೊಳೆ, ರೇಖಾ ಪಾಟೀಲ, ಮಹಾದೇವಿ ಐಹೊಳೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು. Share