ಜೈನ ಸಮಾಜದಿಂದ ಕೊರೊನಾ ವಾರಿಯರ್ಸಗೆ ಊಟದ ವ್ಯವಸ್ಥೆ

ಅಥಣಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ ಮುಂದುವರೆದು ಇಪ್ಪತ್ತೆಂಟು ದಿನಗಳಾಗುತ್ತ ಬಂದಿದ್ದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕೊರೊನಾ ಹರಡದಂತೆ ತಡೆಯಲು ಕರ್ತವ್ಯ ನಿರತ ಪುರಸಭೆ, ಪೋಲಿಸ್ ಮತ್ತು ವೈದ್ಯಕೀಯ ಸಿಬ್ಬಂದಿಗ ಮತ್ತು ಪತ್ರಕರ್ತರಿಗೆ ಅಥಣಿ ತಾಲೂಕಿನ ಜೈನ ಸಮಾಜದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಕಳೆದ ಒಂದು ತಿಂಗಳಿನಿAದಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆಯುತ್ತ ಅಥಣಿ ತಾಲೂಕಿನಲ್ಲಿ ಕೊರೊನಾ ಸೊಂಕು ಹರಡದಂತೆ ತಡೆಯಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಥಣಿ ತಾಲೂಕಿನ ಕಾರ್ಯನಿರತ ಪತ್ರಕರ್ತರು ಸೇರಿದಂತೆ ಪೋಲಿಸ್,ವೈದ್ಯಕೀಯ, ಮತ್ತು ಪೌರಕಾರ್ಮಿಕರು ತಮ್ಮ ಕುಟುಂಬ ವರ್ಗದಿಂದಲೂ ದೂರ ಉಳಿದು ಕರ್ತವ್ಯ ನಿರತರಾಗಿದ್ದು ಅವರ ಕಾರ್ಯವನ್ನು ಎಷ್ಟು ಹೊಗಳಿದರೂ ಸಾಲುವದಿಲ್ಲ.ಎಲ್ಲರ ಕರ್ತವ್ಯ ನಿಷ್ಠೆ ಮತ್ತು ಸಾಮಾಜಿಕ ಕಳಕಳಿಯನ್ನು ಮೆಚ್ಚಿ ಇಂದು ಊಟದ ವ್ಯವಸ್ಥೆ ಮಾಡಿರುವದಾಗಿ ಜೈನ ಸಮುದಾಯದ ಮುಖಂಡ ಸಂಜಯ ನಾಡಗೌಡ ಹೇಳಿದರು.
ಇದೆ ವೇಳೆ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹಾಗೂ ಜೈನ ಸಮುದಾಯದ ಮುಖಂಡ ಕೆ ಎ ವನಜೋಳ ಸಂಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುವವರು ದೇವರಿಗೆ ಸಮ,ಪೋಲಿಸರು ಪತ್ರಕರ್ತರು ಪೌರ ಕಾರ್ಮಿಕರು ಮತ್ತು ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತರ ಇಂದಿನ ಸೇವೆ ಸ್ಮರಣೀಯವಾದುದು.ಈ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತರ ಜೊತೆ ಸಾರ್ವಜನಿಕರು ಸಹಕರಿಸಿ ಕೊರೊನಾ ವೈರಸ್ ತೊಲಗಿಸಲು ಮುಂದಾಗಬೇಕು ಎಂದರು.
ಈ ವೇಳೆ ಅಥಣಿ ತಾಲೂಕಿನ ಜೈನ ಸಮುದಾಯದ ಮುಖಂಡರಾದ ಎ.ಸಿ.ಪಾಟೀಲ, ಅಮರ ದುರ್ಗಣ್ಣವರ,ದುಂಡಪ್ಪ ಅಸ್ಕಿ,ಲಕ್ಷ್ಮಣ ಬನಜವಾಡ,ಸಂಜಯ ನಾಡಗೌಡ ಮತ್ತು ಕೆ ಎ ವನಜೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email