ಅಥಣಿ : ಕೊರೊನಾ ವಾರಿಯರ್ಸ ಜೊತೆಯಾದ ಕನ್ನಡ ಸಂಘಟನೆ

ಅಥಣಿ: ಕೊರೊನಾ ವೈರಸ್ ಮತ್ತು ಲಾಕ್ ಡೌನ ಇಂದಾಗಿ ಸಾಕಷ್ಟು ಬಡವರು,ಕೂಲಿ ಕಾರ್ಮಿಕರು ಮತ್ತು ನಿರ್ಗತಿಕರ ಬದುಕು ಅತಂತ್ರರಾಗಿದ್ದು ಬಹಳಷ್ಟು ಜನರು ಹಸಿವಿನಿಂದ ಕಂಗಾಲಾಗಿದ್ದಾರೆ. ಅಷ್ಟೆ ಅಲ್ಲದೆ ಅಥಣಿ ಪಟ್ಟಣದಲ್ಲಿ ಕೊರೊನಾ ವಾರಿಯರ್ಸ ಆಗಿ ಕೆಲಸ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪುರಸಭೆ ಮತ್ತು ಪೋಲಿಸ್ ಸಿಬ್ಬಂದಿಗೆ ಕರ್ನಾಟಕ ವಿಶ್ವ ನಿರ್ಮಾಣ ಸಂಘಟನೆ ಕಾರ್ಯಕರ್ತರು ಅಲ್ಪೋಪಹಾರ ವಿತರಣೆ ಮಾಡಿದರು.
ಮೂರುನೂರಕ್ಕೂ ಹೆಚ್ಚು ಜನರಿಗೆ ಅಲ್ಪೋಪಹಾರ ವಿತರಣೆ ಮಾಡಿ ಮಾತನಾಡಿದ ಶ್ರೀಶೈಲ ಲೋಣಾರಿ ಕನ್ನಡಪರ ಸಂಘಟನೆಗಳು ಕನ್ನಡಿಗರ ಸಂಕಷ್ಟಕ್ಕೆ ಮಿಡಿಯುವ ಕೆಲಸ ಮಾಡುತ್ತ ಬಂದಿದ್ದು ದೇಶದ ಸಂಕಷ್ಟದ ಈ ಸಮಯದಲ್ಲಿ ಸಾಕಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ ಅಷ್ಟೆ ಅಲ್ಲದೆ ಹಲವು ಇಲಾಖೆಯ ಸಿಬ್ಬಂದಿ ಕಾರ್ಯ ನೀರ್ವಹಿಸುತ್ತಿದ್ದು ಜನರ ಜೀವರಕ್ಷಣೆಗೆ ಶ್ರಮಿಸುತ್ತ ಕೊರೊನಾ ಹರಡದಂತೆ ಜಾಗೃತಿ ಮೂಡಿಸುತ್ತಿರುವ ಕೊರೋನಾ ವಾರಿಯರ್ಸ ಸೇವೆಗೆ ನಾವು ಋಣಿಯಾಗಿದ್ದೇವೆ ಎಂದರು.
ಈ ವೇಳೆ ಜಹಾಂಗೀರ್ ಮುಕ್ಕೇರಿ, ದಾವಲ್ ಶೇಖ್, ಜುಬೇರ ಭಾಗವಾನ, ನವೀದ್ ಮುಕ್ಕೇರಿ, ಹಾರೂನ್ ಪಠಾಣ, ಮತ್ತು ಉಮರ್ ಬಿರಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Share
WhatsApp
Follow by Email