ಬ್ರೇಕಿಂಗ್ ನ್ಯೂಸ್ ಕೋರೊನಾ ವಾರಿಯರ್ಸಗೆ ಸಂಸದರಿಂದ ಅಭಿನಂದನೆ 23/04/202023/04/2020 admin ನಾಗನೂರ ಪಿ.ಕೆ : ಮಹಾಮಾರಿ ಕರೋನ ವೈರಸಗೆ ಜಗತ್ತಿನಾದ್ಯಂತ ಇದುವರೆಗೆ ಲಕ್ಷಂತರ ಜನ ಬಲಿಯಾಗಿದ್ದಾರೆ ನಮ್ಮ ದೇಶ ಹಾಗೂ ರಾಜ್ಯದಲ್ಲಿಯೂ ಈ ವೈರಸ ವ್ಯಾಪಕವಾಗಿ ಹಬ್ಬುತಿದೆ ಈ ರೋಗಕ್ಕೆ ಇದುವರೆಗೆ ಔಷಧಿಯೇ ಇಲ್ಲಾ ಮನುಷ್ಯ ಮನುಷ್ಯರ ನಡುವೆ ಅಂತರ ಕಾಯ್ದುಕೊಳ್ಳುವುದೋಂದೆ ಇದಕ್ಕೆ ಪರಿಹಾರವಾಗಿದೆ.ಇದರ ಮಧ್ಯದಲ್ಲಿದ್ದುಕೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಪೋಲಿಸರ ಹಾಗೆ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಪಂಚಾಯತಿ ಸಿಬ್ಬಂದಿಗಳು ಕೂಡಾ ತಮ್ಮ ಜೀವದ ಹಂಗು ತೂರೆದು ಸೇವೆ ಸಲ್ಲಿಸುತ್ತಿದ್ದಾರೆ. ನಾಗನೂರ ಪಿ.ಕೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಶ್ರೀ ರಾಜೇಂದ್ರ ಪಾಟಕ ಮತ್ತು ಸಿಬ್ಬಂದಿ ವರ್ಗದವರ ಸೇವೆಗೆ ಚಿಕ್ಕೋಡಿ ಜಿಲ್ಲೆಯ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಅವರು ಅಭಿನಂದನೆ ಸಲ್ಲಿಸಿದ್ದಾರೆ. Share