ದೇಶಾದ್ಯಂತ ಒಂದೇ ದಿನ 1,409 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆ

ನವದೆಹಲಿ: ಜಾಗತಿಕವಾಗಿ ಕರೊನಾ ಸೋಂಕಿತರ ಸಂಖ್ಯೆ 26,44,628 ಕ್ಕೆ ಏರಿಕೆಯಾಗಿದ್ದು, 1,84,268 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂತೆಯೇ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,409 ಸೋಂಕಿತರು ಹೆಚ್ಚಾಗಿದ್ದು, ಒಟ್ಟು ಸಂಖ್ಯೆ 21,393ಕ್ಕೆ ತಲುಪಿದೆ. ಕೋವಿಡ್​ನಿಂದಾಗಿ 41 ಸಾವುಗಳು ವರದಿಯಾಗಿದ್ದು, ಈವರೆಗೆ 681 ಜನರು ಮೃತಪಟ್ಟಿದ್ದಾರೆ.

12 ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ದಾಖಲಾಗಿಲ್ಲ. ಅದರೊಂದಿಗೆ 14 ದಿನಗಳಲ್ಲಿ ಹೊಸ ಪ್ರಕರಣಗಳು ದಾಖಲಾಗದ ಜಿಲ್ಲೆಗಳ ಸಂಖ್ಯೆ 78ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಕಳೆದ ತಿಂಗಳಿಗೆ ಹೋಲಿಸಿದಲ್ಲಿ ಕೋವಿಡ್​ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಗಳ ಸಂಖ್ಯೆಯಲ್ಲಿ ಮೂರುವರೆ ಪಟ್ಟು ಹೆಚ್ಚಳವಾಗಿದೆ. ಐಸೋಲೇಷನ್​ ವಾರ್ಡ್​ಗಳ ಸಂಖ್ಯೆಯಲ್ಲಿ 3.6 ಪಟ್ಟು ಹೆಚ್ಚಳವಾಗಿದೆ.
ಕಳೆದ ಮಾರ್ಚ್​ 22ರಂದು ದೇಶಾದ್ಯಂತ 14,915 ಮಾದರಿಗಳನ್ನು ಪರೀಕ್ಷೆ ಮಾಡಲಾಗಿತ್ತು
Share
WhatsApp
Follow by Email