ಬ್ರೇಕಿಂಗ್ ನ್ಯೂಸ್ ಮುಗಳಖೋಡ: ಡಾ.ಸಿ.ಬಿ.ಕುಲಿಗೋಡ ಅವರಿಂದ ಕಲ್ಲಂಗಡಿ ಹಣ್ಣು ವಿತರಣೆ 23/04/202023/04/2020 admin ಮುಗಳಖೋಡ: ಕೊರೊನಾ ರೋಗವು ತನ್ನ ರೌದ್ರಾವತಾರದಿಂದ ಇಡೀ ವಿಶ್ವವನ್ನೇ ತಲ್ಲನಗೊಳಿಸಿದೆ. ಇಂತಹ ಸಮಯದಲ್ಲಿ ಸಾಕಷ್ಟು ಕುಟುಂಬಗಳು ಅನ್ನ ನೀರು ಇಲ್ಲದಂತಾಗಿ ಹಸಿವಿನಿಂದ ಬಳಲುತ್ತಿವೆ. ರೈತರ ಜೀವನವು ಅಸ್ಥವ್ಯಸ್ಥಗೊಂಡಿದ್ದು, ಇಂತಹ ಸಂದರ್ಭದಲ್ಲಿ ರೈತರಿಗೂ ಅನೂಕೂಲವಾಗಲಿ ಬಡಕುಂಟುಬಗಳಿಗೆ ಅನ್ನದಾನ ಮಾಡಿದಂತಾಗುತ್ತದೆ ಎಂದು ಸುಮಾರು 10 ಟನ್ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಮುಗಳಖೋಡದ ಪಟ್ಟಣದದಲ್ಲಿ ಹಂಚುತ್ತಿವೆ ಎಂದು ಜಿ.ಪಂ.ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಹೇಳಿದರು.ಅವರು ಪಟ್ಟಣದಲ್ಲಿ ಅಬ್ಬಾಜಿ ಪೌಂಡೇಶನ್ ಮತ್ತು ಪ್ರತಾಪರಾವ್ ಪಾಟೀಲ ಹಾಗೂ ವಿವೇಕರಾವ್ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಕಲ್ಲಂಗಡಿ ಹಣ್ಣನ್ನು ವಿತರಿಸಿ ಮಾತನಾಡಿ ಇಂದು ರೈತರಿಂದ ನೇರವಾಗಿ ಕರಿಸಿದಿಸಿದ ಈ ಹಣ್ಣುಗಳನ್ನು ಬಡವರಿಗೆ ಈ ಅಭಿಮಾನಿ ಬಳಗದವರೇಲ್ಲರೂ ಕೂಡಿಕೊಂಡು ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ವಿ.ಡಂಬಳ, ವಸಂತ ಹೊಳಕರ, ಪುರಸಭೆ ಸದಸ್ಯರಾದ ಶ್ರೀಮತಿ ಅಂಜಲಿ ಕುಲಿಗೋಡ, ಸಂಜಯ ಕುಲಿಗೋಡ, ಕಪೀಲ ಕರಿಭೀಮಗೋಳ, ಮಹಾವೀರ ಕುರಾಡೆ, ರಾಮು ಪಾಟೀಲ, ವಿಠ್ಠಲ ಯಡವನ್ನವರ, ಕರೇಪ್ಪ ಮಂಟೂರ, ಚಂದು ಗೌಲತ್ತಿನವರ, ರಮೇಶ ಕಾಪಸಿ, ಪ್ರಕಾಶ ಆದಪ್ಪಗೋಳ, ರವಿ ಹುಲ್ಲೋಳ್ಳಿ, ರಮೇಶ ಯಡವನ್ನವರ, ಪಿ.ಬಿ.ಖೇತಗೌಡರ, ಸುರೇಶ ಹೊಸಪೇಟಿ, ಗೋಪಾಲ ಯಡವನ್ನವರ, ಭೀಮರಾಯ ಖೇತಗೌಡರ ಮುಂತಾದವರು ಪಾಲ್ಗೊಂಡಿದ್ದರು. Share