ಬ್ರೇಕಿಂಗ್ ನ್ಯೂಸ್ ಒಂದು ಜಾತಿ, ಒಂದು ಧರ್ಮಕ್ಕೆ ಅಂಟಿಕೊಂಡವರಲ್ಲ ಬಸವಣ್ಣವರು : ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರಿ 26/04/202026/04/2020 admin ಅರಟಾಳ ;ಒಂದು ಜಾತಿ, ಒಂದು ಧರ್ಮಕ್ಕೆ ಅಂಟಿಕೊಂಡವರಲ್ಲ ಬಸವಣ್ಣವರು. ಅವರ ತತ್ವವನ್ನು ಯಾರು ಅಳವಡಿಕೊಳ್ಳತ್ತಿವಿ ಅವರು ಮಾನವ ಧರ್ಮರಾಗುತ್ತಾರೆ ಎಂದು ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದರು.ಅವರು ರವಿವಾರದಂದು ಗ್ರಾಮದ ಶ್ರೀ ಬಸವೇಶ್ವರ ಸರ್ಕಲ್‌ದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಮುಕ್ತಿ ಹೊಂದುತ್ತದೆ. ಧರ್ಮ ಒಂದೆ ಅದು ಮಾನವಧರ್ಮ, ನಾವೆಲ್ಲರು ಒಂದೆ ಎಂಬ ತತ್ವವನ್ನು ಜಾರಿಗೆ ತಂದವರು ಬಸವಣ್ನನವರು. ಅವರ ವಚನಗಳನ್ನು ಕೇಳಿದರೆ ಸಾಕು ಬದುಕು ಸುಖಮಯವಾಗುತ್ತದೆ. ಶ್ರೇಷ್ಟವಾದ ಮಾನವಧರ್ಮವೊಂದನ್ನು ತಂದು ಸರ್ವರಲ್ಲೂ ಸಮತಾಭಾವ, ಸಾಮರಸ್ಯಬದುಕಿಗೆ ಮಾರ್ಗ ತೊರಿಸಿದವರು ಬಸವಣ್ಣವರು ಎಂದು ಹೇಳಿದರು.ಬಸವೇಶ್ವರ ಸರ್ಕಲ್‌ದಲ್ಲಿ ಬಸವಣ್ಣನವರ ಭಾವಚಿತ್ರದ ಪೂಜೆಯನ್ನು ಕರೆಪ್ಪ ಹಿರೇಕುರಬರ ನೇರವೆರಿಸಿದರು. ತಾಪಂ ಸದಸ್ಯ ಶಿವಪ್ಪ ಹಟ್ಟಿ ಜ್ಯೋತಿ ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಗ್ರಾಪಂ ಕಾರ್ಯಾಲಯದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪಿಕೆಪಿಎಸ್ ಕಾರ್ಯದರ್ಶಿ ಪರಮಾನಂದ ಖ್ಯಾಡಿ ಪೂಜೆ ಸಲ್ಲಿಸಿದರು. ಗ್ರಾಪಂ ಪಿಡಿಓ ಎ. ಜಿ. ಎಡಕೆ, ಕಾರ್ಯದರ್ಶಿ ಜಿತೇಂದ್ರ ಗಡಾದೆ, ರಂಗು ಜಂಬಗಿ, ಎಮ್. ಪಿ. ಪಾಟೀಲ, ಅಶೋಕ ಆನಗೊಂಡಿ, ರಮೇಶ ಜಾಧವ, ಶ್ರೀಶೈಲ ಪೂಜಾರಿ, ಮಾಳಪ್ಪ ಕಾಂಬಳೆ, ಕಲ್ಲಪ್ಪ ಪಾಟೀಲ, ವಾಸನಗೌಡ ಜಂಬಗಿ, ಇದ್ದರು. ಕಾರ್ಯಕ್ರಮವನ್ನು ಚನ್ನಬಸು ಬಿರಾದಾರ ನಿರೂಪಿಸಿ ವಂದಿಸಿದರು. Share