ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸದ ಕಾರ್ಮಿಕರಿಗೆ ಗತಿ ಯಾರು ?

ಸುಮಾರು ಕೂಲಿಗಳಿಗೆ ಕಾರ್ಮಿಕ ನೊಂದಾಯಿತ ಕಾರ್ಡ ಇಲ್ಲಾ, ಈ ಸಮಯದಲ್ಲಿ ಇಂತಹವರ ನೆರವಿಗೆ ಬರುವದೇ ಸರಕಾರ.
ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೇ ವಿಶೇಷ.

ಮುದ್ದೇಬಿಹಾಳ: ದೇಶದಲ್ಲೇಡೆ ಕೊರೊನಾ ಮಹಾಮಾರಿ ವೈರಸ್ ನಿಂದ ಜನರು ದಿಕ್ಕಾಪಾಲಾಗಿದ್ದು, ಕೊರೊನಾ ವೈರಸ್ ನಿಂದ ಸಾಯುವರಿಗಿಂತ ಹಸಿವಿನಿಂದ ಸಾಯುವ ಹಂತಕ್ಕೆ ನಮ್ಮ ಸ್ಥೀತಿ ಬಂದು ನಿಂತಿದೆ. ದೇಶದ ಯಾವದೇ ವ್ಯವಹಾರಿಕಾ ಕ್ಷೇತ್ರದ ಮಟ್ಟ ಕೊರೊನಾ ವೈರ್ ನಿಂದ ಹದಗೆಟ್ಟು ಹೊಗಿದೆ. ದಿನನಿತ್ಯ ದುಡಿದು ತಿನ್ನುವರ ಬದುಕು ಬರವಣೆಗೆಯಲ್ಲಿ ಬರಿಯಲು ಸಾದ್ಯವಿಲ್ಲಾ ಎಂಬುವದು ಸರಕಾರ ಮನಗಾಣ ಬೇಕಿದೆ. ಅಂದೇ ದುಡಿದು ಅಂದೇ ತಿನ್ನುವ ಬಡ ಕೂಲಿ ಕಾರ್ಮಿಕರ ಜೀವನ ಹಳಸಿದ ಅನ್ನಕಿಂತ ಕಡೆಯಾಗಿದೆ ಎಂದು ಪ್ರಗತಿಪರರು ಅಂದಾಜಿಸುತ್ತಿದ್ದಾರೆ.
ಹೌದು ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ತನ್ನ ಬಾಹುಳ್ಯವನ್ನು ವ್ಯಾಪಿಸುತ್ತಿದೆ, ಇಂದು ಇಲ್ಲಾ ಅನ್ನುವ ಹಾಗೆ ಇಲ್ಲಾ, ನಾಳೆ ಮತ್ತೇಷ್ಟು ಕೊರೊನಾ ಪತ್ತೇಯಾಗುತ್ತವೆಯೋ ಎಂದು ವೈದ್ಯರು ಲೆಕ್ಕಾ ಹಾಕುತ್ತಿದ್ದರೆ, ಇತ್ತ ಸರಕಾರ ಹಣಿ ಹಣಿ ಬಡಿದುಕೊಳ್ಳುವ ಅಂತಕ್ಕೆ ಬಂದು ನಿಂತಿದೆ. ದೇಶವೆ ಲಾಕ್ಡೌನ್ ಆಗಿರುವದರಿಂದ ಜನರ ಲೇಕ್ಕಾಚಾರ ಕುಸಿದು ಹೊಗಿದೆ.
ನಮ್ಮ ಸುತ್ತಮುತ್ತಲೂ ಇಂದೇ ದುಡಿದು ಜೀವನ ನೆಡಸುವ ಅನೇಕ ಕಾರ್ಮಿಕರು ಇದ್ದಾರೆ, ಅದರಲ್ಲಿ ಅನೇಕರು ಸರಕಾರಿಂದ ಕುರುತಿನ ಕಾರ್ಡ ಮಾಡಿಸಿಕೊಂಡಿದ್ದಾರೆ, ಇನ್ನು ದಿನನಿತ್ಯ ದುಡಿಯುವ ಕೂಲಿಗಳಿಗೆ ಕಾರ್ಮಿಕ ಕಾರ್ಡ ಮಾಡಿಸಿಕೊಂಡಿಲ್ಲಾ, ಇವರನ್ನು ಹುಡುಕಿ ಗುರುತ್ತಿನ ಕಾಡ್ ಮಾಡಿಕೊಡುವ ಗೋಜಿಗೆ ಯಾವತ್ತು ಕಾರ್ಮಿಕ ಇಲಾಖೆ ಹೋಗಿಲ್ಲಾ.
ಆದರೆ ಇಂದು ಸರಕಾರದಿಂದ ನೊಂದಾಯಿತರಾಗಿರುವ ಹಲವು ಕಾರ್ಮಿಕರು ತಮ್ಮ ಗುರುತಿನ ಕಾರ್ಡಗಳನ್ನು ಪುನರ್ ನೊಂದಾವಣಿ ಮಾಡಿಸರದ ಪರಿಣಾಮ ನೊಂದಾಯಿಸಿದ ಕಾರ್ಮಿಕರ ಕಾರ್ಡೆ ರದ್ದಾಗಿ ಹೊಗಿವೆ. ಇದರಿಂದ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದ್ದು, ಇದನ್ನು ಸರಕಾರ ಮನಗಂಡು ಕಾರ್ಮಿಕ ಕಾರ್ಡ ಇರದವರಿಗೂ ಕಾರ್ಮಿಕ ಇಲಾಖೆಯಿಂದ ., ನೀಡುವಂತ ಅನುದಾನವನ್ನು ನೀಡಬೇಕಾಗಿದೆ.
ಸರಕಾರವೇನೋ ನೊಂದಾವಣಿಯಾದ ಕಾರ್ಮಿಕರ ಪಾಸ್ಬುಕ್ ಗೆ ಲಾಕ್ಡೌನ್ ನಿಂದ ಬದುಕಲು ತೊಂದರೆಯಾಗಬಾರದು ಎಂದು 2000 ಸಾವಿರ ಕಾರ್ಮಿಕ ಅನುದಾನದಡಿಯಲ್ಲಿ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸರಕಾರದ ಇಲಾಖೆಯಲ್ಲಿ ಕಾರ್ಮಿಕ ಎಂದು ನೊಂದಣಿಯಾಗದೆ ಇರುವ ಲಕ್ಷಾಂತರ ಕಾರ್ಮಿಕರು ಬೀದಿಯಲ್ಲಿ ಬಿದ್ದಿದ್ದಾರೆ, ಅವರ ಗೋಳು ಕೇಳುವರು ಯಾರು ? ಇದೇ ರೀತಿಯಲ್ಲಿ ಲಾಕ್ಡೌನ್ ಮುಂದುವರೇದರೆ ಅವರ ಜೀವನುಪಾಯಕ್ಕೆ ಸರಕಾರ ಏನು ಕೊಡುಗೆ ನೀಡುತ್ತದೆ ಎಂದು ಅವರು ಚಿಂತೆಯಲ್ಲಿ ಬದುಕು ನಡೆಸುತ್ತಿದ್ದಾರೆ. ಇಂತ ಕೆಳ ಮಟ್ಟದ ಕಾರ್ಮಿಕರ ಬದುಕಿನ ಬಂಡಿಗೆ ಸರಕಾರ ಆಸರೆಯಾಗಲೆಬೇಕಿದೆ.
ಇಗಾಗಲೆ ಲಾಕ್ಡೌನ್ ತಿಂಗಳೆ ಮುಗಿಯುತ್ತಲೇ ಬರುತ್ತಿದೆ, ಆದರೆ ಕೊರೊನಾ ವೈರಸ್ ಮುಗಿಯುವ ಲಕ್ಷಣಗಳು ಕಾಣುತ್ತಲ್ಲಾ, ಶ್ರೀಮಂತರು ಅದೇ ಹೇಗೋ ಬದುಕು ನಡೆಸುತ್ತಾರೆ, ಸ್ಲಂ ನಿವಾಸಿಗಳು , ಕಾರ್ಮಿಕರು, ಸಣ್ಣಪುಟ್ಟ ವ್ಯವಹಾರವನ್ನು ಮಾಡಿಕೊಂಡು ಬದುಕು ನಡೆಸುವರು ಬದುಕು ಇಗಾ ತಂತಿಯ ಮೇಲೆ ನಡೆಯುತ್ತಿದೆ. ದುಡಿಯಲು ಕೆಲಸವಿಲ್ಲ, ತಿನ್ನಲು ಸರಿಯಾದ ರೀತಿಯಲ್ಲಿ ಅನ್ನದ ವ್ಯವಸ್ಥೇಯಿಲ್ಲಾ, ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಸರಕಾರವೇನೋ ಉಚಿತವಾಗಿ ಪಡಿತರ ರೇಷನ್ ಕೊಡುತ್ತಿದೆ, ಅದರ ಜೋತೆ ಬದುಕು ನಡೆಸಲು ಇನ್ನೂ ಅನೇಕ ಜೀವನಾಂಶ ಬೇಕಾಗುತ್ತದೆ. ಅದನ್ನೇಲ್ಲಾ ದುಡಿಮೆ ಇಲ್ಲದೆ ಎಲ್ಲಿಂದ ತರಬೇಕು ಎಂದು ಕೂಲಿ ಕಾರ್ಮಿಕರು ಚಿಂತೆಗೀಡಾಗಿದ್ದಾರೆ. ಒಟ್ಟಿನಲ್ಲಿ ದಿನನಿತ್ಯ ದುಡಿದು ತಿನ್ನುವ ವರ್ಗಕ್ಕೆ ಈ ಕೊರೊನಾ ವೈರಸ್ ನಿಂದ ಬಾರಿ ತೊಂದರೆಯಾಗಿದ್ದು, ಸರಕಾರ ಇನ್ನಷ್ಟು ಹೇಚ್ಚಿನ ಅನುದಾನ ಆಯಾ ತಾಲೂಕುಗಳಿಗೆ ನೀಡಿ ಸ್ಥಳೀಯ ಮಟ್ಟದ ಅಧಿಕಾರಿಗಳು ಜನರ ಸಂಕಷ್ಟಕ್ಕೆ ಆಸರೆಯಾಗಬೇಕಿದೆ. ಒಂದು ವೇಳೆ ಸರಕಾರ ಸಾಮಾನ್ಯ ಜನರ ರಕ್ಷಣೆಗೆ ನಿಲ್ಲದೆ ಹೋದರೆ, ಕೊರೊನಾ ವೈರಸ್‌ನಿಂದ ಸಾವು ನೊವುಗಳಿಗಿಂತ ಹಸೀವಿನಿಂದ ಆಗುವ ಲಕ್ಷಣಗಳು ಬಹಳ ಇದ್ದಾವೆ ಎಂದು ಪ್ರಗತಿಪರ , ಸಮಾಜ ಚಿಂತಕರು ಆರೋಪ ಮಾಡುತ್ತೀದ್ದಾರೆ.
ಸರಕಾರ ಕೊರೊನಾ ವೈರಸ್ ನ್ನು ನಿರ್ಮೂಲನೆ ಮಾಡುವ ನೀಟ್ಟಿನಲ್ಲಿ ಸುಮಾರು ಒಂದು ತಾಲೂಕಿಗೆ ಇಂತಿಷ್ಟು ಲಕ್ಷ ಅನುದಾನವನ್ನು ಬಿಡುಗೆಡ ಮಾಡಿದೆಯಂತೆ, ಆದರೆ ಇದರಲ್ಲೂ ಅಧಿಕಾರಿಗಳೂ ಮತ್ತು ಜನಪ್ರತಿನಿಧಿಗಳು ಗೋಲ್ಮಾಲ್ ಮಾಡಿ ಸರಕಾರದ ಅನುದಾನವನ್ನು ಬಳಸಿಕೊಳ್ಳುತ್ತಿದ್ದಾರೆನ್ನುವ ಆರೋಪ ಕೇಳಿ ಬರುತ್ತಿದೆ. ಈ ಆರೋಪ ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವದು ಮುಂದಿನ ದಿನಮಾನಗಳಲ್ಲಿ ಜನಸಾಮಾನ್ಯರಿಗೆ ತಿಳಿಯಲಿದೆ.
ಬಾಕ್ಸ್ ನ್ಯೂಸ್ : ದಿನನಿತ್ಯ ದುಡಿದು ಜೀವನ ನಡೆಸುವರ ಬದುಕು ಬಹಳ ಚಿಂತಾಜನಕವಾಗಿದೆ, ಸರಕಾರ ಕೊರೊನಾ ವೈರಸನ್ನು ನಿರ್ಮೂಲನೆ ಮಾಡಲು ನೀಡಿರುವ ಅನುದಾನ ಸಮರ್ಪಕವಾಗಿ ಬಳಸಿಕೊಂಡು, ಜನಸಾಮಾನ್ಯರಿಗೆ ಬದುಕಲು ಅನೂಕೂಲ ಮಾಡಿಕೊಡಬೇಕಿದೆ ಎಂದು ದಲಿತಪರ ಹೋರಾಟಗಾರ ಎಮ್ ಸಿ ಪೂಜಾರಿ ಹೇಳಿದರು.
Share
WhatsApp
Follow by Email