ಶ್ರೀ ಬಸವೇಶ್ವರ ಜಯಂತಿ ನಿಮಿತ್ಯ ಡಾ. ಪದ್ಮಜೀತ ನಾಡಗೌಡಪಾಟೀಲ ಫೌಂಡೇಶನ್ ವತಿಯಿಂದ ತರಕಾರಿ ಹಂಚಿಕೆ

ರಬಕವಿ-ಬನಹಟ್ಟಿ : ಈ ಕರೋನಾ ಹೆಮ್ಮಾರಿ ರೋಗವು ಈ ಸಲ ದೇಶ ತುಂಬೆಲ್ಲಾ ಹರಡಿರುವದರಿಂದ ಈ ಬಾರಿ ಶ್ರೀ ಬಸವೇಶ್ವರ ಜಯಂತಿಯನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿ ರೈತ ನಾಯಕ ಡಾ. ಪದ್ಮಜೀತ ನಾಡಗೌಡಪಾಟೀಲ ಫೌಂಡೇಶನ್ ವತಿಯಿಂದ ತೇರದಾಳ ಮತಕ್ಷೇತ್ರದ ಮಹಾಲಿಂಗಪೂರ ನಗರದಲ್ಲಿ ತರಕಾರಿ ಹಂಚಿದರು.
ರೈತನೇ ದೇಶದ ಬೇನ್ನೆಲುಬು ಎಂದು ತಿಳಿದು, ಈಗ ಬಂದಿರುವ ಕರೋನಾ ಹೆಮ್ಮಾರಿ ರೋಗವು ಎಲ್ಲ ನಮ್ಮ ರೈತ ಬಾಂಧವರನ್ನು ಅವರು ಬೆಳೆದ ಬೆಳೆಗಳನ್ನು ಮಾರದ ರೀತಿ ಮಾಡಿ ಹಪಿ ಹಪಿಸುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ನಮ್ಮ ರೈತನಾಯಕ ಡಾ. ಪದ್ಮಜೀತ ನಾಡಗೌಡಪಾಟೀಲ ನೇರ ರೈತರ ಹೊಲಗಳಿಗೆ ಹೋಗಿ ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡಿ ರೈತ ಬಾಂಧವರಿಗೆ ಪ್ರೀತಿ ಪಾತ್ರರಾದರು.
Share
WhatsApp
Follow by Email