ಬ್ರೇಕಿಂಗ್ ನ್ಯೂಸ್ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಥರ್ಮಾ ಮೀಟರ್ ವಿತರಣೆ 27/04/202027/04/2020 admin ಚಿಕ್ಕೋಡಿ: ದೇಶದಲ್ಲಿಯೇ ಮೊದಲ ಬಾರಿ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯ ಕರ್ತೆಯರಿಗೆ ನಿಪ್ಪಾಣಿ ನಗರಸಭೆಯ ವತಿಯಿಂದ ಥರ್ಮಲ್ ಸ್ಕ್ರೀನಿಂಗ್ ಥರ್ಮಾ ಮೀಟರಗಳನ್ನು ನೀಡಲಾಗಿದೆ. ತಮ್ಮ ಕ್ಷೇತ್ರದಲ್ಲಿ ನಡೆದ ಈ ಕಾರ್ಯದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಸಚಿವೆ ಶಶಿಕಲಾ ಜೊಲ್ಲೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.ನಿಪ್ಪಾಣಿ ನಗರಸಭೆ ಹಾಗೂ ಆರೋಗ್ಯ ಇಲಾಖೆ ಯೊಂದಿಗೆ ಆಯ್ ಎಮ್ ಎ, ರೋಟರಿ ಕ್ಲಬ್.ಇನ್ನಿತರ ಸಂಘ ಸಂಸ್ಥೆಗಳ ಮೂಲಕ ಸುಮಾರು 41 ಥರ್ಮಲ ಸ್ಕ್ರೀನಿಂಗ್ ಥರ್ಮಾ ಮೀಟರ್‍ಗಳನ್ನು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಯಿತು.ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಸಭೆಯ ಸದಸ್ಯರು ಗಳು,ರೋಟರಿ ಕ್ಲಬ್ ನ ಸದಸ್ಯರು, ಆಯ್ ಎಮ್ ಎ ಸಂಘಟನೆಯ ಸದಸ್ಯರು ಹಾಜರಿದ್ದರು Share