Skip to content
You are Here Home 2020 April 27 ಪ್ರತಿ ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ವಿತರಣೆ ಮಾಡಿದ ಕೆಎಂಎಫ್ ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಗೆ ದೂರವಾಣಿ ಮೂಲಕ ಅಭಿನಂದನೆ ಸಲ್ಲಿಸಿದ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ
ಮೂಡಲಗಿ : ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ಪ್ರತಿ ಕುಟುಂಬಗಳಿಗೆ ದಿನಸಿ ವಸ್ತುಗಳ ಕಿಟ್ ವಿತರಿಸಿದ ಕೆಎಂಎಫ್ ರಾಜ್ಯಾಧ್ಯಕ್ಷ ಹಾಗೂ ಅರಬಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಮಾಡಿರುವಂತ ಕಾರ್ಯ ಶ್ಲಾಘನೀಯ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದರು. ಸೋಮವಾರದಂದು ಪತ್ರಕರ್ತರ ಜೊತೆ ಮಾತನಾಡಿ, ಇವತ್ತು ದೇಶದಲ್ಲಿ ಕೊರೋನಾ ವೈರಸ್ ಬಂದು ಇಡೀ ನಮ್ಮ ದೇಶವನೇ ಅಲೋಲ ಕಲ್ಲೋಲ ಮಾಡುತ್ತಿರುವ ಹಿನ್ನೆಲೆ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇಂದರಿಂದ ನಮ್ಮ ಅರಬಾಂವಿ ಕ್ಷೆತ್ರದ ಕೂಲಿ ಕಾರ್ಮಿಕರಿಗೆ ಮತ್ತು ಬಡ ಜನರಿಗೆ ಅಂಗಡಿ ಮುಗ್ಗಟ್ಟುಗಳು ಬಂದಿರುವುದರಿಂದ ದಿವಸಿ ವಸ್ತುಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿತ್ತು. ಈ ಪರಿಸ್ಥಿತಿಯನ್ನು ಮನಗಂಡು ನಮ್ಮ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿ ಕುಟುಂಬಗಳಿಗೂ ದಿನಸಿ ವಸ್ತುಗಳನ್ನು ವಿತರಣೆ ಮಾಡುತ್ತಿದ್ದು. ಇದು ಒಂದು ಒಳ್ಳೆಯ ಸಂಗತಿ, ನಮ್ಮ ಕ್ಷೇತ್ರದ ಬಡ ಜನರ ಕಷ್ಟಗಳಿಗೆ ಶಾಸಕರು ಕೂಡ ಭಾಗಿಯಾಗಿ ಬಡಜನರ ಜೊತೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಇವತ್ತು ಶಾಸಕರು ಹಾಗೂ ನಾನು ರಾಜಕೀಯಲ್ಲಿ ಬೇರೆ ಬೇರೆಯಾದರು ಹಾಗೂ ರಾಜಕೀಯದಲ್ಲಿ ನಾನು ಶಾಸಕರ ವಿರೋಧಿಯಾದರು ಸಹ ಶಾಸಕರು ಮಾಡಿರುವಂತ ಕಾರ್ಯ ಮೆಚ್ಚಲೇಬೇಕಾದ ಸಂಗತಿ ಇದಾಗಿದೆ. ಕಳೆದ 2 ವರ್ಷಗಳ ಹಿಂದೆ ಶಾಸಕರ ವಿರುದ್ಧ ನಾನು ಚುನಾವಣೆ ಕಣದಲ್ಲಿ ಸ್ಪರ್ಧಿಸಿದ್ದರು ಸಹ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು, ನಮ್ಮ ಕುಟುಂಬಕ್ಕೂ ಕೂಡ ದಿನಸಿ ವಸ್ತುಗಳ ಪೂರೈಕೆ ಮಾಡಿದ್ದು ಶಾಸಕರು ತಾರತಮ್ಮ ಮಾಡದೆ ತಮ್ಮ ಕ್ಷೇತ್ರದ ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ಅವರ ಕಾರ್ಯಕ್ಕೆ ನಾನು ಕೂಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ರಾಜಕೀಯ ಮಾಡದೆ ಪ್ರತಿ ಕುಟುಂಬಗಳಿಗೆ ದಿನಸಿ ವಸ್ತುಗಳು ಮುಟ್ಟಿಸುವಂತೆ ಕೆಲಸ ಮಾಡುತ್ತಿರುವುದು ತುಂಬಾ ಸಂತಸದ ವಿಷಯವಾಗಿದೆ. ಇದರಿಂದ ಶಾಸಕರಿಗೂ ಕೂಡ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ ಎಂದು ಹೇಳಿದರು.
Post navigation