ರಾಯಬಾಗ: ಕೊರೋನಾದಲ್ಲಿ ನಿರಂತರ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ಪೋಲೀಸ್ ಇಲಾಖೆಯವರನ್ನು ಸತ್ಕರಿಸಿದ ಶಾಸಕ ಸತೀಶ ಜಾರಕಿಹೊಳಿ

ರಾಯಬಾಗ: ಕೊರೋನಾದಲ್ಲಿ ನಿರಂತರ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ಪೋಲೀಸ್ ಇಲಾಖೆಯವರನ್ನು ಸತ್ಕರಿಸಿದ ಶಾಸಕ ಸತೀಶ ಜಾರಕಿಹೊಳಿ

ರಾಯಬಾಗ : ಕೊರೋನಾದಿಂದ ಲಾಕಡೌನ್ ಹಿನ್ನಲೆಯಲ್ಲಿ ರಾಯಬಾಗ ಬ್ಲಾಕ್ ಕಾಂಗ್ರೇಸ್ ಕಮೀಟಿ ವತಿಯಿಂದ ಪಟ್ಟಣದ ಬಡಕುಟುಂಬಳಿಗೆ ಆಹಾರ ಧಾನ್ಯ ಪದಾರ್ಥಗಳ ಕೀಟ್ ವಿತರಣೆ ಹಾಗೂ ಕೊರೋನಾದಲ್ಲಿ ನಿರಂತರ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ಪೋಲೀಸ್ ಅಧಿಕಾರಿಗಳನ್ನು ಶಾಸಕ ಸತೀಶ ಜಾರಕಿಹೊಳಿ ಸೋಮವಾರ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಸತ್ಕರಿಸಿದರು.
ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿ ಕೊರೊನಾ ವೈರಸ್ ಈ ಮಹಾಮಾರಿ ರೋಗದ ನಿಯಂತ್ರಣಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಹಾಗೂ ಪೊಲೀಸ್ ಇಲಾಖೆಯ ಸೇವೆ ಶ್ಲಾಘನಿಯವಾಗಿದೆ ಎಲ್ಲರೂ ಈ ರೋಗವನ್ನು ಒಡಿಸಲು ಪ್ರತಿಯೊಬ್ಬರು ಮುಂಜಾಗೃತ ಕ್ರಮಕೈಗೊಂಡು ಅದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಕಮೀಟಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಹಾವೀರ ಮೊಹಿತೆ, ಕಾಂಗ್ರೆಸ್ ಮುಖಂಡ ಧೂಳಗೌಡ ಪಾಟೀಲ, ಅಪ್ಪಾಸಾಬ ಕುಲಗುಡೆ, ತೇಜಶ್ವೀನಿ ನಾಯಿಕವಾಡಿ, ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ, ಸದಾಶಿವ ದೇಶಿಂಗೆ, ದಿಲೀಪ ಜಮಾದರ, ಬಿ.ಎನ್.ಬಂಡಗಾರ, ರಾಜು ಶಿರಗಾಂವೆ, ಶೇಖರ ಹಾರೂಗೇರಿ, ಗಣೇಶ ಮೊಹಿತೆ, ಹಾಜಿ ಮುಲ್ಲಾ ಪ.ಪಂ.ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಪಿಎಸ್‌ಐ ಗಜಾನನ ನಾಯಿಕ ಸೇರಿದಂತೆ ಅನೇಕರು ಇದ್ದರು.
Share
WhatsApp
Follow by Email