ಗಣಿಗಾರಿಕೆ ತಹಶಿಲ್ದಾರ, ಸಿಬ್ಬಂದಿಗಳ ಕೊಲೆ ಯತ್ನ

ಗಣಿಗಾರಿಕೆ ತಹಶಿಲ್ದಾರ, ಸಿಬ್ಬಂದಿಗಳ ಕೊಲೆ ಯತ್ನ



ಅಥಣಿ: ಕೊರೊನಾ ಲಾಕ್‌ಡೌನ ನಡುವೆಯೂ ಅಕ್ರಮ ಮರಳು ಸಾಗಾಟ ಮುಂದುವರೆದಿದ್ದು ಅಕ್ರಮ ತಡೆಯಲು ಹೋದ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ಮೇಲೆ ವಾಹನ ಚಲಾಯಿಸಿ ಕೊಲೆಗೆ ಯತ್ನ ನಡೆದಿದೆ. ಬಾಳು ಹಜಾರೆ ಎಂಬಾತ ಟ್ರ‍್ಯಾಕ್ಟರ್‌ನ್ನು ತಹಶೀಲ್ದಾರ ವಾಹನಕ್ಕೆ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನ ನಡೆಸಲಾಗಿದೆ. ಈ ವೇಳೆ ಟ್ರಾಕ್ಟರ್ ತಡೆಯಲು ಹೋದ ತಹಶಿಲ್ದಾರ ವಾಹನ ಚಾಲಕ ಅನೀಲ ಗಸ್ತಿಗೆ ಟ್ರಾಕ್ಟರ್ ಡಿಕ್ಕಿ ಹೊಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ನಡೆದಿದೆ.
ಜಾಗತಿಕ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಅಥಣಿ ಪೋಲಿಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೊಂದು ಕಡೆ ಪೋಲಿಸರ ಅನಿವಾರ್ಯತೆಯನ್ನೆ ಬಂಡವಾಳ ಮಾಡಿಕೊಂಡು ಅಕ್ರಮ ಮರಳು ಧಂಧೆ ಅವ್ಯಾಹತವಾಗಿ ನಡೆದಿದೆ ಇನ್ನೂ ಅಕ್ರಮ ತಡೆಯಲು ಹೋದ ತಹಶಿಲ್ದಾರ ಮೇಲಿನ ಹಲ್ಲೆ ಯತ್ನದಿಂದಾಗಿ ಕಂದಾಯ ಇಲಾಖೆಯ ಉಳಿದ ಸಿಬ್ಬಂದಿ ಕೂಡ ಭಯದ ವಾತಾವರಣದಲ್ಲಿ ಕೆಲಸ ನೀರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಭೂ ಮತ್ತು ಗಣಿಗಾರಿಕೆ ಇಲಾಖೆಯ ಸಿಬ್ಬಂದಿ ಅಥಣಿ ತಾಲೂಕಿನ ಅಕ್ರಮಗಳ ಮಾಹಿತಿ ತಿಳಿದರೂ ಜಾಣ ಮೌನವಹಿಸಿದ್ದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ತಡೆಯುವ ಹಂತದಲ್ಲಿ ಲೋಕೋಪಯೋಗಿ ಇಲಾಖೆ, ತಹಶಿಲ್ದಾರ ಹಾಗೂ ಪೋಲಿಸ್ ಮತ್ತು ಮೈನ್ಸ ಆಂಡ್ ಜೀಯಾಲಾಜಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಯೂ ಅಕ್ರಮ ದಂಧೆಕೋರರಿಗೆ ಲಾಭದಾಯಕವಾಗಿ ಪರಿಣಮಿಸಿದೆ. ಕೃಷ್ಣಾ ನದಿಯಲ್ಲಿ ಸದ್ಯ ನೀರು ಹರಿಯದೆ ತಡೆ ಹಿಡಿಯಲಾಗಿದ್ದು ಅಗ್ರಾಣಿ ನದಿಯ ಹರಿವಿನ ಉದ್ದಗಲಕ್ಕೂ ಬರುವ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಇನ್ನೂ ಇದೆ ವಿಷಯವಾಗಿ ಅಥಣಿ ಪೋಲಿಸ್ ಇಲಾಖೆಯ ಹಲವರು ಅಮಾನತ್ತುಗೊಂಡಿರುವ ಘಟನೆ ಮಾಸುವ ಮೊದಲೇ ಇಂತಹ ಘಟನೆ ಮರುಕಳಿಸಿದ್ದು ಅಕ್ರಮ ಮರಳು ಮಾಫಿಯಾ ಕಬಂದ ಬಾಹುಗಳು ಬೆಳೆದು ನಿಂತಿವೆ ಅನ್ನುವದಕ್ಕೆ ಸಾಕ್ಷಿ ಸಿಕ್ಕಂತಾಗಿದ್ದು ಇನ್ನಾದರೂ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕುತ್ತಾರಾ ಪೊಲೀಸ್ ಅಧಿಕಾರಿಗಳು ಅನ್ನುವದು ಯಕ್ಷ ಪ್ರಶ್ನೆಯಾಗಿದೆ. ಅಥಣಿ ತಾಲೂಕಿನ ಖಿಳೆಗಾಂವ-ಶಿರೂರ ನಡುವೆ ಹಳ್ಳದಲ್ಲಿ ಮರಳು ಗಣಿಗಾರಿಕೆ ಮಾಹಿತಿ ಪಡೆದು ತಹಶಿಲ್ದಾರ ದುಂಡಪ್ಪ ಕೋಮಾರ ಮತ್ತು ಸಿಬ್ಬಂದಿ ದಾಳಿ ನಡೆಸಿದ ವೇಳೆ ಈ ಘಟನೆ ನಡೆದಿದ್ದು ಆರೋಪಿ ಬಾಳು ಹಜಾರೆ ಮತ್ತು ಇತರರು ಸ್ಥಳದಿಂದ ಪರಾರಿಯಾಗಿದ್ದು ಪ್ರಕರಣ ದಾಖಲಿಸಿಕೊಂಡ ಅಥಣಿ ಪೋಲಿಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ಧಾರೆ
Share
WhatsApp
Follow by Email