ಹೀರೆಕಾಯಿ ಬೆಳೆ ಸಂಪೂರ್ಣ ನಾಶ

ಹೀರೆಕಾಯಿ ಬೆಳೆ ಸಂಪೂರ್ಣ ನಾಶ

ವಿಶೇಷ ವರದಿ  ಯಲ್ಲಪ್ಪ ಮಬನೂರ
ಚಿಕ್ಕೋಡಿ:  ಲಾಕ್ ಡೌನ್ ಪರಿಣಾಮದಿಂದಾಗಿ  ಹೀರೇಕಾಯಿ ಬೆಳೆಗೆ ಕನಿಷ್ಠ ಬೆಲೆ ಸಿಗದೆ ಇರುವುದರಿಂದ ಸುಮಾರು 7-8 ಲಕ್ಷ ರೂಪಾಯಿ ನಷ್ಟ ಆಗಿದ್ದು ಹೀರೇಕಾಯಿ ಬೆಳೆ ಸಂಪೂರ್ಣ ನಾಶ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.ಹೌದು ಇಂತಹ ಘಟನೆ ನಡೆದಿರುವದು ಸಮೀಪದ ದಿಗ್ಗೇವಾಡಿ ಗ್ರಾಮದಲ್ಲಿ. ಚಿದಾನಂದ ಚೌಗಲೆ ಅವರು ತಮ್ಮ ಒಂದೂವರೆ ಎಕರೆ  ಜಮೀನಿನಲ್ಲಿ ಸುಮಾರು 1.30 ಲಕ್ಷ ರೂಪಾಯಿ ನಷ್ಟು ಖರ್ಚು ಮಾಡಿ ಹೀರೆಕಾಯಿ ಬೆಳೆದಿದ್ದ. ಇನ್ನೇನ್ನು  ಕಟಾವು ಮಾಡಿ ಮಾರುಕಟ್ಟೆಗೆ ಸಾಗಾಟ ಮಾಡಬೇಕೆನ್ನುವಷ್ಟರಲ್ಲಿ ದೇಶದಲ್ಲಿ ಕೊರೊನಾ ಸೋಂಕು ತಡೆಯುವದಕ್ಕಾಗಿ ಕೇಂದ್ರ ಸರಕಾರ ಲಾಕ್ ಡೌನ್ ಜಾರಿ ಮಾಡಿತ್ತು. ಇದರಿಂದಾಗಿ ನನ್ನ ಬದಕು ನುಚ್ಚು ನೂರಾಗಿದೆ ಎಂದು ರೈತ ಚಿದಾನಂದ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ.       ಹೀರೇಕಾಯಿ  ಬೆಳೆ, ಬೆಳೆದು ಕೈ ಸುಟ್ಟುಕೊಂಡು ಕಂಗಲಾಗಿದ್ದಾರೆ.  ಲಕ್ಷಾಂತರ  ರೂಪಾಯಿಗಳ ನಷ್ಟ ಅನುಭವಿಸಿದ್ದು ಇದೀಗ ಅನ್ನದಾತ ಸೋತು ಸುಣ್ಣಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಒಂದೇ ದಾರಿ ಎನ್ನುವಂತಾಗಿದೆ. ಕೃಷಿ ಚಟುವಟಿಕೆ ಹಾಗೂ ಕೃಷಿ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿತ್ತಾದರೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವದರಿಂದ ಹಾಗೂ ಖರೀದಾರರು ಮುಂದೆ ಬಾರದಿದ್ದಾಗ ಇದೀಗ  ರೈತ ಸಾವಿನ ದವಡೆಯಲ್ಲಿ ಸಿಲುಕಿ ನರಳಾಡುತ್ತಿದ್ದಾನೆ.ಕಳೆದ ವರ್ಷ ವರುಣ ಕೈ ಕೊಟ್ಟಿದ್ದರಿಂದ ಈ ರೈತ ಭೀತ್ತನೆ ಮಾಡಿರಲಿಲ್ಲ. ಈ ವರ್ಷ ಮುಂಗಾರು ಸಾಕಷ್ಟು ಪ್ರಮಾಣದಲ್ಲಿ ಸುರಿದಿರುವದರಿಂದ ಅಂರ್ತರಜಲ ಮಟ್ಟ ಹೆಚ್ಚಾಗಿರುವದರಿಂದ ಈ ಭಾರಿ ಹೀರೇಕಾಯಿ ಫಸಲು ಉತ್ತಮವಾಗಿ ಬಂದು ಬದಕು ಹಸನಾಗುತ್ತದೆ ಎಂದು ಅನ್ನದಾತ ಬೇವರು ಸುರಿಸಿ ಭರವಸೆಯಿಂದ ಕೃಷಿ ಕೈಗೊಂಡಿದ್ದರು. ಇದೀಗ ಲಾಕ್ ಡೌನ್ ರೈತನ ಬದಕು ಮೂರಾಭಟ್ಟಿ ಮಾಡಿದೆ.  ಸಾಲ ಮಾಡಿ ಸೋತು ಹೋಗಿರುವ ಈ ರೈತನ ನೆರವಿಗೆ ಜಿಲ್ಲಾಡಳಿತ ಧಾವಿಸುವ ಅವಶ್ಯಕತೆಯಿದೆ.ಟೋಮೆಟೋ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ಈ ರೈತನ ನೆರವಿಗೆ ಬರುವಂತೆ ಅಲ್ಲಿನ ಜನರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಎಚ್ಚೇತುಕೊಂಡು ನೊಂದ ರೈತನ ಕಷ್ಟಕ್ಕೆ ಸ್ಪಂದನೆ ಮಾಡುವ ಮೂಲಕ ಆತನಲ್ಲಿ ಧೈರ್ಯ ತುಂಬುವ ಕಾರ್ಯ ಮಾಡುವಂತೆ ಅಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಯಾವ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ. 

ಬಾಕ್ಸ್ ನ್ಯೂಸ್ :

ಲಾಕ್ ಡೌನ್‍ದಿಂದ ರೈತರು ಜೀವನ ದುಸ್ತರವಾಗಿದೆ. ತರಕಾರಿಗಳನ್ನು ರೈತರಿಂದ ಖರೀದಿ ಮಾಡುವ ಮೂಲಕ ರೈತರ ನೋವಿಗೆ ಸರಕಾರ ಧಾವಿಸಬೇಕಾಗಿದೆ.  ಅಲ್ಲದೇ ಮಾರ್ಕೆಟ್ ಇಲ್ಲ. ಅಲ್ದೇ ಆಲಿಕಲ್ಲು ಬಿದ್ದು ಬೆಳೆಯೂ ನಷ್ಟವಾಗಿದೆ. ಆದ್ದರಿಂದ ಬೇಳೆಯನ್ನು ಕಿತ್ತು ಒಗೆಯುತ್ತಿದ್ದೇವೆ ಎಂದು ಅಸಮದಾನ ಹೊರ ಹಾಕಿದ್ದಾನೆ.* ಚಿದಾನಂದ ಚೌಗಲೆ  ನೊಂದ ರೈತ , .

Share
WhatsApp
Follow by Email