ಮೂಡಲಗಿ ಬಸವೇಶ್ವರ ಸೊಸೈಟಿಯಲ್ಲಿ ತಾಲ್ಲೂಕು ಕಸಪಾ ಮತ್ತು ಪತ್ರಕರ್ತರ ಸಂಘದಿoದ ಅಗಲಿದ ಕವಿ ಕೆ.ಎಸ್. ನಿಸಾರ ಅಹಮದ ಅವರಿಗೆ ನುಡಿ ನಮ ಸಲ್ಲಿಸಿದರು

ಮೂಡಲಗಿ ಬಸವೇಶ್ವರ ಸೊಸೈಟಿಯಲ್ಲಿ ತಾಲ್ಲೂಕು ಕಸಪಾ ಮತ್ತು ಪತ್ರಕರ್ತರ ಸಂಘದಿoದ ಅಗಲಿದ ಕವಿ ಕೆ.ಎಸ್. ನಿಸಾರ ಅಹಮದ ಅವರಿಗೆ ನುಡಿ ನಮ ಸಲ್ಲಿಸಿದರು

ಕೆ.ಎಸ್. ನಿಸಾರ ಅಹಮದ ಜನ ಮನ್ನಣೆ ಗಳಿಸಿದ ಕವಿ
ಮೂಡಲಗಿ: ಮೂಡಲಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಪತ್ರಕರ್ತರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಬಸವೇಶ್ವರ ಕೋ.ಆಪ್. ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ಅಗಲಿದ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ ಅವರಿಗೆ ನುಡಿ ನಮನ ಏರ್ಪಡಿಸಿದ್ದರು.
ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಮಾತನಾಡಿ ‘ನಿಸಾರ ಅಹಮದ ಅವರು ತಮ್ಮ ಸಮಕಾಲೀನ ಕವಿಗಳಂತೆ ಆಗದೆ ನವೋದಯ ಮತ್ತು ನವ್ಯ ಕಾಲಘಟ್ಟದಲ್ಲಿ ವಿಭಿನ್ನವಾಗಿ ತಮ್ಮದೆಯಾದ ಛಾಪನ್ನು ಬೀರಿ ಶ್ರೇಷ್ಠ ಕವಿಯಾಗಿ ಜನ ಮನ್ನಣೆ ಗಳಿಸಿದ್ದರು ಎಂದರು.
ಬಾಲಶೇಖರ ಬಂದಿ ಮಾತನಾಡಿ ನಿಸಾರ ಅಹಮದ ಅವರು ಸರ್ವಕಾಲಿಕ ಕವಿಯಾಗಿ ಬೆಳೆದವರು. ಸೂರ್ಯ, ಚಂದ್ರ ಇರುವವರೆಗೆ ಅವರ ನಿತ್ಯೋತ್ಸವ ಕಾವ್ಯದ ಮೂಲಕ ಕವಿ ನಮ್ಮೊಂದಿಗೆ ಇರುತ್ತಾರೆ ಎಂದರು.
ಕಸಾಪ ಅಧ್ಯಕ್ಷ ಸಿದ್ರಾಮ್ ದ್ಯಾಗಾನಟ್ಟಿ ಮಾತನಾಡಿ ಬಾಲಕರಿದ್ದಾಗಲೆ ನಿಸಾರ ಅಹಮದ ಅವರು ಕವಿತೆಯನ್ನು ಬರೆಯಲು ಪ್ರಾರಂಭಿಸಿದ್ದು, ವಿಜ್ಞಾನ ವಿಷಯ ಆಯ್ಕೆಮಾಡಿಕೊಂಡಿದ್ದರು ಸಹ ಕಾವ್ಯ ಅವರ ಬದುಕು ಆಗಿತ್ತು ಎಂದರು.
ಪ್ರೊ. ಸಾವಿತ್ರಿ ಕಮಲಾಪುರ ಮಾತನಾಡಿ ನಿಸಾರ ಅಹಮದ ಅವರು ಕಾವ್ಯ, ವೈಚಾರಿಕತೆ ಮತ್ತು ಮಕ್ಕಳ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ನೀಡಿದ ಜನ ಮೆಚ್ಚಿದ ಸಾಹಿತಿಯಾಗಿದ್ದರು ಎಂದರು.
ಮೌನ ಆಚರಿಸಿ ಕವಿಗೆ ಗೌರವ ಅರ್ಪಿಸಿದರು.
ಬಸವೇಶ್ವರ ಸೊಸೈಟಿ ನಿರ್ದೇಶಕ ಶ್ರೀಶೈಲ್ ಮದಗನ್ನವರ, ಶಿವಾನಂದ ಹಿರೇಮಠ, ಯ.ಯ. ಸುಲ್ತಾನಪುರ, ವಿ.ಎಚ್. ಬಾಲರಡ್ಡಿ, ಲಕ್ಷö್ಮಣ ಅಡಿಹುಡಿ, ಅಲ್ತಾಫ ಹವಾಲ್ದಾರ, ಮಹಾದೇವ ನಡುವಿನಕೇರಿ, ಚಿದಾನಂದ ಹೂಗಾರ, ಶಿವನಗೌಡ ಪಾಟೀಲ, ಪ್ರಕಾಶ ಮೇತ್ರಿ ಭಾಗವಹಿಸಿದ್ದರು
Share
WhatsApp
Follow by Email