ಬ್ರೇಕಿಂಗ್ ನ್ಯೂಸ್ ಕುಡಿದ ಅಮಲಿನಲ್ಲಿ ಗೆಳೆಯರೊಂದಿಗೆ ಈಜಲು ಹೋಗಿ ಸಾವು 06/05/202006/05/20201 min read admin ಈಜಲು ಹೋಗಿ ಸಾವುಸವದತ್ತಿ: ಲಾಕ್‌ಡೌನ್ ಸಡಿಲಗೊಂಡು ಬಾರ್‌ಗಳು ಆರಂಭವಾದ ಸೋಮವಾರ ಮೊದಲ ದಿನವೇ ಕುಡಿದು ಮಸಣ ಸೇರಿದ ಅವಘಡ ಸ್ಥಳೀಯವಾಗಿ ಜರುಗಿದೆ. ಇಲ್ಲಿನ ಬಂಡಿ ಓಣಿಯ ಸುಭಾಸ ರಾಜಪ್ಪ ಶಿಂಧೆ (38) ಮೃತಪಟ್ಟ ದುರ್ದೈವಿ.ಸೋಮವಾರ ಮದ್ಯಸೇವಿಸಿ ಕುಡಿದ ಅಮಲಿನಲ್ಲಿ ಗೆಳೆಯರೊಂದಿಗೆ ಈಜಲು ಹೋಗಿ ಮಲಪ್ರಭಾ ನದಿಯ ಜಾಕವೆಲ್‌ನಲ್ಲಿ ಮೃತಹೊಂದಿದ್ದಾನೆoದು ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ ಶವಸಿಕ್ಕಿದ್ದು ಅಂತ್ಯಸoಸ್ಕಾರ ನಡೆಸಲಾಗಿದೆ. ಮೃತನಿಗೆ ಪತ್ನಿ ಪ್ರಿಯಾ ಹಾಗೂ ವೇದಾ(15), ಪ್ರೀತಮ್(13) ಮಕ್ಕಳಿದ್ದಾರೆ.ಅಗ್ನಿಶಾಮಕ ಹಾಗೂ ಪೋಲಿಸ್ ಇಲಾಖೆಗಳಿಂದ ಮೃತದೇಹವನ್ನು ನದಿಯಿಂದ ಹೊರಗೆ ತಿಗೆದಿರಿಸಿದ್ದಾರೆ. ಅಗ್ನಿಶಾಮಕ ಅಧಿಕಾರಿ ಎಮ್.ಕೆ. ಕಲಾದಗಿ, ಪಿಎಸ್‌ಆಯ್ ನಾಗನಗೌಡಾ ಕಟ್ಟಿಮನಿಗೌಡ್ರ ಈ ಕುರಿತು ಸವದತ್ತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ Share