ಬ್ರೇಕಿಂಗ್ ನ್ಯೂಸ್ ವೈನ ಶಾಪಗಳಲ್ಲಿ ಮದ್ಯ ಖಾಲಿ ಖಾಲಿ: ಮದ್ಯ ಪ್ರಿಯರು ಕಂಗಾಲು 06/05/202006/05/20201 min read admin ಮುಗಳಖೋಡ: ಪಟ್ಟಣದ ನಾಲ್ಕು ವೈನ್ ಶಾಪಗಳಲ್ಲಿ ಮದ್ಯ ಖಾಲಿ ಆಗಿರುವುದರಿಂದ ಜನ ಪರದಾಡುವಂತಾ ಘಟನೆ ಮುಗಳಖೋಡ ಪಟ್ಟಣದಲ್ಲಿ ಕಾಣಿಸಿತು.ಪಟ್ಟಣದ ಸುತ್ತ-ಮುತ್ತಲಿನ ಹಳ್ಳಿಗಳಾದ ಖಣದಾಳ, ಸವಸುದ್ದಿ, ಪಾಲಬಾಂವಿ, ಸುಲ್ತಾನಪುರ, ಕಪ್ಪಲಗುದ್ದಿ, ಹಳ್ಳೂರ, ಹಂದಿಗುAದ, ಹಿಡಕಲ್ ಬಾಗಲಕೋಟಿ ಜಿಲ್ಲೆಯ ಸಸಾಲಟ್ಟಿ, ಸಮೀರವಾಡಿ ಸೇರಿದಂತೆ ಮುಂತಾದ ಹಳ್ಳಿಗಳ ಮದ್ಯಪ್ರಿಯರಿಗೆ ಮುಗಳಖೋಡದಲ್ಲಿ ಮದ್ಯ ಸಿಗದೆ ನಿರಾಶೆಗೊಂಡು ಮರಳಿ ತಮ್ಮೂರಿಗೆ ತೆರಳಿದ ಘಟನೆ ನಡೆಯಿತು.ಇದಕ್ಕೆ ಸಂಬAದಿಸಿದ ರಾಯಬಾಗ ಅಬಕಾರಿ ಇಲಾಖೆಯ ಸಬ್ ಇನ್ಸಪೆಕ್ಟರ ಹಣಮಂತ ಪಟ್ಟಾಯತ ಕಳೆದ ಹಲವಾರು ದಿನಗಳಿಂದ ಬಾಕಿ ಉಳಿದ ಮದ್ಯವನ್ನು ಮಾರಾಟ ಮಾಡಲಾಗಿದ್ದು ಇನ್ನೇರಡು ದಿನಗಳಲ್ಲಿ ಮದ್ಯ ಮಳಿಗೆಗಳಿಗೆ ಸರಬರಾಜು ಆಗಲಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. Share