ಬ್ರೇಕಿಂಗ್ ನ್ಯೂಸ್ ಕೇರಳ ವಿದ್ಯಾರ್ಥಿನಿಯರಿಗೆ ಬಸ್ ವ್ಯವಸ್ಥೆ ಮಾಡಿದ ಶಾಸಕಿ 09/05/202009/05/2020 admin ಬೆಳಗಾವಿ : ಲಾಕ್ ಡೌನ್ ನಿಂದಾಗಿ ಸಿಕ್ಕಿಕೊಂಡಿದ್ದ ಕೇರಳ ಮೂಲದ ವಿದ್ಯಾರ್ಥಿನಿಯರು ತಮ್ಮ ಸ್ವಂತ ನಾಡಿಗೆ ತೆರಳು ಶಾಸಕಿ ಲಕ್ಷ್ಮಿ ಹೆಬ್ಬಾಳರ್ ನೆರವಾಗಿದ್ದಾರೆ.ಬೈಲಹೊಂಗಲ ತಾಲೂಕು ಇಂಚಲದಲ್ಲಿ ಕಾಲೇಜು ಓದುತ್ತಿರುವ ವಿದ್ಯಾರ್ಥಿನಿಯರು ಲಾಕ್ ಡೌನ್ ಆದಾಗಿನಿಂದ ಕಾಲೇಜೂ ಇಲ್ಲದೆ, ಊರಿಗೂ ತೆರಳಲಾಗದೆ ಕಂಗಾಲಾಗಿದ್ದರು. ಅವರಿಗೆ ಕೇರಳಕ್ಕೆ ತೆರಳಲು ಸ್ವಂತ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿದ ಹೆಬ್ಬಾಳಕರ್, ಅದಕ್ಕೆ ಅಗತ್ಯವಾದ ಪಾಸ್ ಸೇರಿದಂತೆ ಎಲ್ಲವ್ಯವಸ್ತೆ ಮಾಡಿ ಕಳುಹಿಸಿಕೊಟ್ಟರು. ಲಕ್ಷ್ಮಿ ಹೆಬ್ಬಾಳಕರ್ ಸಹಾಯಕ್ಕೆ ವಿದ್ಯಾರ್ಥಿನಿಯರು ಕೃತಜ್ಞತೆ ಸಲ್ಲಿಸಿದರು. Share